×
Ad

“ಟೋಪಿ ಹಾಗು ದಾಡಿವಾಲಾಗಳ ಜನಸಂಖ್ಯೆಯನ್ನು ನಿಯಂತ್ರಿಸಬೇಕು”

Update: 2017-12-07 22:37 IST

ಗುಜರಾತ್, ಡಿ.7: “ಟೋಪಿ ಹಾಗು ದಾಡಿವಾಲಾಗಳ ಜನಸಂಖ್ಯೆಯನ್ನು ನಿಯಂತ್ರಿಸಬೇಕು” ಎಂದು ಗುಜರಾತ್ ನ ದಭೋಯ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೈಲೇಶ್ ಸೊಟ್ಟ ಎಂಬವರು ಪ್ರಚೋದನಾತ್ಮಕ ಭಾಷಣ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಲ್ಲಿ ಯಾರಾದರೂ ಟೋಪಿ ಅಥವಾ ದಾಡಿವಾಲಾಗಳಿದ್ದರೆ ನನ್ನನ್ನು ಕ್ಷಮಿಸಿ, ಅವರ ಜನಸಂಖ್ಯೆಯನ್ನು ಕಡಿಮೆ ಮಾಡುವ ಅಗತ್ಯವಿದೆ. ನಾನು ಹೀಗೆ ಹೇಳಬಾರದು ಎಂದು ಹಲವು ನಾಯಕರು ಹೇಳಿದ್ದರು. ಆದರೆ ನನಗೆ 90ಶೇ, ಜನರ ಬೆಂಬಲವಿದೆ. ಆದ್ದರಿಂದ ಉಳಿದ 10 ಶೇ. ಜನರ ಬಗ್ಗೆ ಮಾತನಾಡುವುದನ್ನು ನಾನೇಕೆ ನಿಲ್ಲಿಸಬೇಕು” ಎಂದವರು ಹೇಳಿರುವುದಾಗಿ hindustantimes.com ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಶೈಲೇಶ್ ಸೊಟ್ಟರ ಪ್ರಚೋದನಾತ್ಮಕ ಭಾಷಣದ ವಿಡಿಯೋ ವೈರಲ್ ಆಗಿದೆ. “ನೀನು ಜನಿಸಿದ ಸಮುದಾಯದ ಬಗ್ಗೆ ಮಾತನಾಡಬಾರದು ಎಂದು ಅವರು ಹೇಳಿದ್ದರು. ಆ ಬಗ್ಗೆ ಮಾತನಾಡಲು ಬಯಸುವುದಾದರೆ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ಹೇಳಿದ್ದರು. ಆದರೆ ನಾನು ನನ್ನ ಧರ್ಮಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ” ಎಂದು ಸೊಟ್ಟ ಹೇಳಿದ್ದಾರೆ.

ವಡೋದರಾದ ಕೌನ್ಸಿಲರ್ ಆಗಿರುವ ಸೊಟ್ಟ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News