ಟಿಪ್ಪು ಸುಲ್ತಾನನ ರಾಜನೀತಿ

Update: 2017-12-09 10:40 GMT

ತನ್ನ ಪ್ರಜೆಗಳ ಆರ್ಥಿಕ ಪ್ರಗತಿಗೆ ಕೈಗಾರಿಕೆಗಳ ಬೆಳವಣಿಗೆ ಬಹಳ ಮುಖ್ಯ ಎಂದು ಟಿಪ್ಪು ಸುಲ್ತಾನ ಮನಗಂಡಿದ್ದ. ಆಂತರಿಕ ಮತ್ತು ವಿದೇಶಿ ವ್ಯಾಪಾರ ಸಂಬಂಧಗಳು ಬೆಳೆಯಬೇಕೆಂಬ ಗುರಿಯೊಂದಿಗೆ ಧರ್ಮ, ಜಾತಿ ಅಥವಾ ಪಂಗಡಗಳನ್ನು ಮೀರಿ ವ್ಯಾಪಾರಿ ಸಮುದಾಯಗಳನ್ನು ಉತ್ತೇಜಿಸಿದ. ಉದಾಹರಣೆಗೆ ದಾವಣಗೆರೆಯ ಲಿಂಗಾಯತ ಸಮುದಾಯ ಮೂಲತಃ ದಾವಣಗೆರೆ ಬೆಟ್ಟೂರು ಗ್ರಾಮಕ್ಕೆ ಹೊಂದಿಕೊಂಡಿದ್ದ ಉಪಗ್ರಾಮವಾಗಿತ್ತು. ಟಿಪ್ಪು ಸುಲ್ತಾನನ ತಂದೆ ಹೈದರಲಿ ದಾವಣಗೆರೆಯನ್ನು ಮರಾಠ ಮುಖಂಡ ಅಪ್ಪೋಜಿ ರಾವ್‌ಗೆ ಜಹಗೀರಾಗಿ ನೀಡಿದ್ದ. ಅಪ್ಪೋಜಿ ರಾವ್ ದಾವಣಗೆರೆಯಲ್ಲಿ ವ್ಯಾಪಾರಿಗಳು ನೆಲೆಸಲು ಉತ್ತೇಜಿಸಿದ. ಅಪ್ಪೋಜಿ ರಾವ್ ವಾರಸುದಾರರಿಲ್ಲದೆ ತೀರಿಹೋದ. ಆದರೆ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ದಾವಣಗೆರೆ ವ್ಯಾಪಾರಿ ಕೇಂದ್ರವಾಗಿ ಬೆಳೆಯಿತು. ಇಂದಿಗೂ ಚಿತ್ರದುರ್ಗ ಜಿಲ್ಲೆಯ ಅತ್ಯಂತ ಜನನಿಬಿಡ ಪಟ್ಟಣವಾಗಿರುವ ದಾವಣಗೆರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಪ್ರಮುಖ ವ್ಯಾಪಾರಿ ಕೇಂದ್ರವಾಗಿದೆ.

ವ್ಯಾಪಾರ ಮತ್ತು ವಾಣಿಜ್ಯ

ತನ್ನ ರಾಜ್ಯದ ಹಲವು ಅಗತ್ಯ ಉತ್ಪನ್ನಗಳನ್ನು ರಫ್ತುಮಾಡುವುದನ್ನು ಟಿಪ್ಪು ನಿಷೇಧಿಸಿದ್ದ. ಆಂತರಿಕ ಬಳಕೆಗೆ ಧಕ್ಕೆಯಾಗಬಾರದೆಂಬುದು ಇದರ ಉದ್ದೇಶವಾಗಿತ್ತು. ಅಧಿಕ ಉತ್ಪನ್ನವನ್ನು ಮಾತ್ರ ರಫ್ತುಗೊಳಿಸಿ ಆರ್ಥಿಕತೆಯನ್ನು ಶಕ್ತಗೊಳಿಸುತ್ತಿದ್ದ.

ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆಯೂ ಟಿಪ್ಪುವಿಗೆ ವಿರೋಧವಿತ್ತು. ಕಾರಣ ಆಂತರಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಇದೇ ವಸ್ತುಗಳು ದುಬಾರಿಯಾಗುವ ಸಾಧ್ಯತೆಗಳಿದ್ದವು.

(ಮುಂದುವರಿಯುತ್ತದೆ)

Writer - ಡಾ॥ ಲಕ್ಷ್ಮೀಪತಿ.ಸಿ.ಜಿ

contributor

Editor - ಡಾ॥ ಲಕ್ಷ್ಮೀಪತಿ.ಸಿ.ಜಿ

contributor

Similar News