ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ ಕೆವಿನ್ ಪೀಟರ್ಸನ್

Update: 2017-12-09 18:30 GMT

ಲಂಡನ್, ಡಿ.9: ಇಂಗ್ಲೆಂಡ್‌ನ ಖ್ಯಾತ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರು ಕ್ರಿಕೆಟ್ ವೃತ್ತಿ ಬದುಕಿನಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ. ಮುಂಬರುವ ಬಿಗ್ ಬ್ಯಾಶ್ ಲೀಗ್ ಅವರ ವೃತ್ತಿ ಬದುಕಿನ ಕೊನೆಯ ಕ್ರಿಕೆಟ್ ಲೀಗ್ ಆಗಿರುತ್ತದೆ. 2005ರಲ್ಲಿ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದ ಪೀಟರ್ಸನ್ ಅವರು 104 ಟೆಸ್ಟ್‌ಗಳಲ್ಲಿ 23 ಶತಕ ಮತ್ತು 35 ಅರ್ಧಶತಕಗಳನ್ನು ಒಳಗೊಂಡ 8,181 ರನ್ ದಾಖಲಿಸಿದ್ದಾರೆ.

136 ಏಕದಿನ ಪಂದ್ಯಗಳಲ್ಲಿ 9 ಶತಕ ಮತ್ತು 25 ಅರ್ಧಶತಕವಿರುವ 4,440 ರನ್. 37 ಟ್ವೆಂಟಿ-20 ಪಂದ್ಯಗಳಲ್ಲಿ 1,176 ರನ್ ದಾಖಲಿಸಿದ್ದಾರೆ. 7 ಅರ್ಧಶತಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News