ಇಂಗ್ಲೆಂಡ್‌ನ ಕ್ರಿಕೆಟಿಗ ಡಕೆಟ್ ಅಮಾನತು

Update: 2017-12-09 18:39 GMT

ಪರ್ತ್, ಡಿ.9: ಪರ್ತ್‌ನ ಬಾರ್ ಒಂದರಲ್ಲಿ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮೇಲೆ ಮದ್ಯ ಸುರಿದ ಪ್ರಕರಣಕ್ಕೆ ಸಂಬಂಧಿಸಿ ಇಂಗ್ಲೆಂಡ್ ತಂಡದ ದಾಂಡಿಗ ಬೆನ್ ಡಕೆಟ್ ಅವರನ್ನು ತಂಡದಿಂದ ಅಮಾನತು ಮಾಡಲಾಗಿದೆ.

ಪರ್ತ್‌ನಲ್ಲಿ ನಡೆದ ಕ್ರಿಕೆಟ್ ಆಸ್ಟ್ರೇಲಿಯ ವಿರುದ್ಧದ ಎರಡು ದಿನಗಳ ಅಭ್ಯಾಸ ಪಂದ್ಯಕ್ಕೆ ಡಕೆಟ್ ಆರಂಭದಲ್ಲಿ ಆಯ್ಕೆಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವಕಾಶ ವಂಚಿತಗೊಂಡಿದ್ದರು.

ಡೆಕೆಟ್ ಗುರುವಾರ ಪಾನಮತ್ತರಾಗಿ ಹಿರಿಯ ಆಟಗಾರರೊಂದಿಗೆ ವಾಗ್ವಾದ ನಡೆಸಿದ್ದರು. ಈ ಕಾರಣದಿಂದಾಗಿ ಇಸಿಬಿ ಅವರನ್ನು ತಂಡದಿಂದ ಅಮಾನತುಗೊಳಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸಲಿದ್ದಾರೆ.

 ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸರಣಿಯ ಆರಂಭದಲ್ಲೇ ಕಳೆದ ಸೆಪ್ಟಂಬರ್‌ನಲ್ಲಿ ಬ್ರಿಸ್ಟಲ್‌ನ ನೈಟ್‌ಕ್ಲಬ್‌ನ ಹೊರಗಡೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ತಂಡದಿಂದ ಹೊರದಬ್ಬಲ್ಪಟ್ಟಿದ್ದರು. ಡಕೆಟ್ ಇಂಗ್ಲೆಂಡ್ ಪರ 4 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಹಿಂದೆಯೂ ಎರಡು ಬಾರಿ ವಿವಾದಲ್ಲಿ ಸಿಲುಕಿಕೊಂಡಿದ್ದರು. ಫಿಟ್‌ನೆಸ್ ಕಾರಣಕ್ಕಾಗಿ ಅಂಡರ್ -19 ತಂಡದಿಂದ ಕೈಬಿಡಲಾಗಿತ್ತು. ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News