ಸಾಹಿತ್ಯ ನಿರಂತರ ಹರಿಯುವ ನೀರು: ಡಾ.ಬಸವರಾಜ ಕಲ್ಗುಡಿ

Update: 2017-12-10 13:04 GMT

  ಬೆಂಗಳೂರು, ಡಿ.10: ಸಾಹಿತ್ಯ ಕ್ಷೇತ್ರವು ನಿರಂತರವಾಗಿ ಹರಿಯುವ ನೀರು ಎಂದು ಸಾಹಿತಿ, ಚಿಂತಕ ಡಾ.ಬಸವರಾಜ ಕಲ್ಗುಡಿ ಹೇಳಿದ್ದಾರೆ.

  ರವಿವಾರ ರಾಜಾಜಿನಗರದ ಆಕೃತಿ ಪುಸ್ತಕ ಸಭಾಂಗಣದಲ್ಲಿ ಆಯೋಜಿಸಿದ್ದ ಸುಭಾಷ್ ರಾಜಮಾನೆ ಅವರು ಬರೆದಿರುವ 'ನಿರ್ದಿಗಂತವಾಗಿ ಏರಿ' ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

   ಸಾಹಿತ್ಯ ಕ್ಷೇತ್ರವು ನಿಂತಿದೆಯೆಂದು ಕೆಲವರು ಹೇಳುತ್ತಾರೆ. ಆದರೆ, ಸಾಹಿತ್ಯ ಕ್ಷೇತ್ರದ ಕೃಷಿಯು ಯಾವುದಾದರು ಒಂದು ಭಾಗದಲ್ಲಿ ಚಲನೆಯಲ್ಲಿರುತ್ತದೆ ಎಂದು ಹೇಳಿದರು.

   ನಾವು ಯಾವುದೇ ಲೇಖಕರನ್ನು ಅವರ ವಿಚಾರಗಳ ಮೂಲಕ ನೋಡಬೇಕೇ ವಿನಹ ದ್ವೇಷದ ಮೂಲಕ ನೋಡಬಾರದು. ಅಲ್ಲದೆ, ಈ ಸುಭಾಷ್ ರಾಜಮಾನೆ ಅವರು ರಚಿಸಿರುವ 'ನಿರ್ದಿಂಗತವಾಗಿ ಏರಿ' ಕೃತಿಯೂ ಕನ್ನಡ ವಿಮರ್ಶೆಯ ಕೃತಿಗಳನ್ನು ಮೀರಿ ಬೆಳೆದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಸುಭಾಷ್ ರಾಜಮಾನೆ, ಕೃಷ್ಣಪ್ಪ, ಚಂದ್ರಶೇಖರ್ ಮೇಲ್ಮನೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News