ಡಿ. 11: ಮೈಸೂರಿನಲ್ಲಿ ಸಅದಿಯ ಶಿಕ್ಷಣ ಸಂಸ್ಥೆ ಉದ್ಘಾಟನೆ

Update: 2017-12-10 13:49 GMT

ಮೈಸೂರು, ಡಿ. 11: ಬೆಂಗಳೂರು ಸಅದಿಯ ಫೌಂಡೇಷನ್ ಇದರ ಅಧೀನದ ಮೈಸೂರು ನಗರದ ಟಿಪ್ಪು ಟೌನ್ ನಲ್ಲಿ ಪ್ರಾರಂಭವಾಗಲಿರುವ ದಾರುಲ್ ಉಲೂಮ್ ಗರೀಬ್ ನವಾಝ್ ಸಅದಿಯ ಸ್ಕೂಲ್ ಆಫ್ ಇಸ್ಲಾಮಿಕ್ ಸೈನ್ಸ್ ಸಂಸ್ಥೆಯನ್ನು ಸೈಯದ್ ಕೆ ಎಸ್  ಆಟಕೋಯ್ ತಂಙಲ್ ಕುಂಬೋಲ್ ಅವರು ಡಿ. 11ರಂದು ಉದ್ಘಾಟಿಸಲಿದ್ದಾರೆ.

ಕಳೆದ ಹದಿನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ಸಮುದಾಯದ ಬಡ ನಿರ್ಗತಿಗ ಹಾಗೂ ಸ್ಲಮ್ ನಿವಾಸಿ ಮಕ್ಕಳ ಶ್ಯಕ್ಷಣಿಕ ಅಭಿವೃದ್ಧಿಗೆ ಒತ್ತುಕೊಟ್ಟು ಶೈಕ್ಷಣಿಕ ಕ್ರಾಂತಿಯೊಂದಿಗೆ ತನ್ನ ಕೃಸ್ಟಲ್ ಜುಬಿಲೀ ಆಚರಿಸುತ್ತಿರುವ ಸಂಸ್ಥೆಯ ನೂತನ ಯೋಜನೆ ಮೈಸೂರಿನ ಬಡ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. 

ಕಟ್ಟಡದ ಮುಖ್ಯ ದ್ವಾರವನ್ನು ಶಿಕ್ಷಣ ಸಚಿವ  ತನ್ವೀರ್ ಸೇಠ್  ಉದ್ಘಾಟಿಸಲಿದ್ದಾರೆ, ಕಂಪ್ಯೂಟರ್  ತರಬೇತಿ ಕೇಂದ್ರವನ್ನು ಫಿಝಾ ಗ್ರೂಪ್ ಮಾಲಕ  ಬಿ ಎಂ ಫಾರೂಕ್  ಉದ್ಘಾಟಿಸುವರು. ಮೈಸೂರ್ ಸರ್ ಕಾಝಿ ಮೌಲಾನಾ ಮುಫ್ತಿ ಉಸ್ಮಾನ್ ಶರೀಫ್ ಸಾಹಿಬ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ ಎಸ್ ಎಫ್  ರಾಜ್ಯಾಧ್ಯಕ್ಷ  ಇಸ್ಮಾಯಿಲ್ ಕೊಂಡಂಗೆರಿ, ಭಾವೇಕ್ಯ ಪೀಠಾಧಿಪತಿ ಶ್ರೀ ಬಸವಲಿಂಗ ಮೂರ್ತಿ ಶರಣರು ಭಾಷಣ ಮಾಡಲಿದ್ದಾರೆ.

ಮೈಸೂರ್ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ, ಮೌಲಾನಾ ಸೂಫಿ ಮುಕ್ತಿಯರ್ ಅಹ್ಮದ್  ನೂರಿ, ಸ್ಥಳೀಯ ಶಾಸಕ ಜಿ ಟಿ ದೇವೇಗೌಡ, ವಾಸು ಎಂಎಲ್ ಎ, ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನನವರ್, ಡಾ ಅನ್ವರ್ ಶರೀಫ್, ಅಬ್ದುಲ್ಲಾ ಮೈಸೂರ್ ಬಾವ, ಡಾ. ಎಸ್ ಎಸ್ ಎ ಖಾದರ್, ಟಿಪ್ಪು ಸುಲ್ತಾನ್ ಟ್ರಸ್ಟ್ ವೈಸ್ ಚೈರ್ಮನ್  ಅಬ್ದುಲ್ ಅಝೀಝ್, ಟಿಪ್ಪು ಸುಲ್ತಾನ್ ಟ್ರಸ್ಟ್ ನ  ಝಹಿದುಲ್ಲಾ ಖಾನ್, ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ  ಅಬ್ದುಲ್ ಲತೀಫ್ ಸುಂಟಿಕೊಪ್ಪ, ಶ್ರೀರಂಗ ಪಟ್ಟಣ ಟಿಪ್ಪು ವಕ್ಫ್ ಉಪಾಧ್ಯಕ್ಷ  ಯೂನುಸ್ ಸಾಹೇಬ್, ಮೈಸೂರು  ಜಿಲ್ಲಾ  ವಕ್ಫ್ ಮಾಜಿ ಅಧ್ಯಕ್ಷ  ಉರೂಝ್ ಅಹ್ಮದ್ ಹಾಗು ಇತರರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸಾರಥಿ ಮೌಲಾನಾ ಎನ್ ಕೆ ಎಂ ಶಾಫಿ ಸಅದಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News