ಮಕ್ಕಳ ಸೃಜನಶೀಲತೆಗೆ ಸಾಂಸ್ಕೃತಿಕತೆ ಅಗತ್ಯ: ಡಿ.ಎಂ.ಕಿರಣ್

Update: 2017-12-10 15:39 GMT

 ಬೆಂಗಳೂರು, ಡಿ.10: ಮಕ್ಕಳಲ್ಲಿ ಅಡಗಿರುವ ಅಂತರ್ಗತ ಕಲೆಯನ್ನು ಹೊರತಂದು, ಅವರಲ್ಲಿ ಆತ್ಮಶ್ವಾಸ ಹೆಚ್ಚಿಸಲು ಸೃಜನಾತ್ಮಕ ಕಾರ್ಯಕ್ರಮಗಳನ್ನು ಪ್ರತಿಶಾಲೆಯಲ್ಲಿ ಆಯೋಜಿಸುವುದು ಅಗತ್ಯವೆಂದು ಯೂತ್ ಫಾರ್ ಸೇವಾದ ರಾಷ್ಟ್ರೀಯ ಅಧ್ಯಕ್ಷ ಸಂಸ್ಥೆಯ ಮುಖ್ಯಸ್ಥ ಡಿ.ಎಂ.ಕಿರಣ್ ಹೇಳಿದರು.

 ರವಿವಾರ ಯೂತ್ ಫಾರ್ ಸೇವಾ ಸಂಸ್ಥೆ ಅಂತರ್ ಶಾಲಾ ಮಕ್ಕಳಿಗಾಗಿ ನಗರದ ವಿಜಯಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಕರಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಮಟ್ಟದಲ್ಲಿ ಚಿಗುರು ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಶಿರಸಿ, ಹುಬ್ಬಳ್ಳಿ ಹಾಗೂ ಬೆಳಗಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗಿದ್ದು, ಒಟ್ಟು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಸಾಹಿತ್ಯ ಸಾಂಸ್ಕೃತಿಕ ತಿಳುವಳಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

 ನೃತ್ಯ, ರಸಪ್ರಶ್ನೆ, ಸಮೂಹ ಗಾಯನ, ಯೋಗ, ಕಿರಿಯ ವಿಜ್ಞಾನಿ, ರಂಗೋಲಿ, ಏಕಪಾತ್ರಾಭಿನಯ ಹೀಗೆ ವಿವಿಧ ಸ್ಪರ್ಧೆಗಳ ಈ ಬೃಹತ್ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಎಪ್ಪತ್ತಕ್ಕೂ ಹೆಚ್ಚು ಶಾಲೆಗಳಿಂದ ಹಾಗೂ ಅನಾಥಾಶ್ರಮಗಳಿಂದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಸಿದ್ದರು.

ಡೆಲ್ ಕಂಪೆನಿಯ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಅಲೋಕ್ ಓರಿಯಾ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಸ್ಕೋ ಸೇರಿದಂತೆ ಹಲವು ಐಟಿ ಕಂಪನಿಗಳ ಉದ್ಯೋಗಿಗಳು ಸ್ವಯಂಸೇವಕರಾಗಿ ಕಾರ್ಯಕ್ರಮದಲ್ಲಿ ಭಾಗವಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News