ಭಾರತ-ಆಫ್ರಿಕ ಅಭ್ಯಾಸ ಪಂದ್ಯಗಳು ರದ್ದು

Update: 2017-12-11 18:34 GMT

ಜೋಹಾನ್ಸ್‌ಬರ್ಗ್, ಡಿ.11: ಪ್ರವಾಸಿ ಭಾರತ ಮತ್ತು ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡಗಳ ನಡುವೆ ಮುಂದಿನ ತಿಂಗಳು ನಡೆಯಲಿರುವ ಟೆಸ್ಟ್ ಸರಣಿಗೆ ತಯಾರಿ ನಡೆಸಲು ನಿಗದಿಯಾಗಿದ್ದ ಎರಡು ಅಭ್ಯಾಸ ಪಂದ್ಯಗಳು ರದ್ದಾಗಿದೆ. ಭಾರತ ಅಭ್ಯಾಸ ಪಂದ್ಯಗಳು ನಿಗದಿಯಾದ ದಿನಗಳಲ್ಲಿ ನೆಟ್ ಅಭ್ಯಾಸ ನಡೆಸಲಿದೆ. ಟೀಮ್ ಇಂಡಿಯಾ ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಳ್ಳದೆ ನೇರವಾಗಿ ಜ.5ರಿಂದ ಕೇಪ್‌ಟೌನ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಅಫ್ರಿಕ ತಂಡವನ್ನು ಎದುರಿಸಲಿದೆ. ಅಭ್ಯಾಸ ಪಂದ್ಯಗಳು ರದ್ದಾಗಿರುವುದಕ್ಕೆ ದಕ್ಷಿಣ ಆಫ್ರಿಕ ಕ್ರಿಕೆಟ್ ಸಂಸ್ಥೆ(ಸಿಎಸ್‌ಎ) ಯಾವುದೇ ಅಧಿಕೃತ ಕಾರಣ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News