ಡಿ.13ರಂದು ಮದೀನಾದಲ್ಲಿ ಜಾಗತಿಕ ಇಸ್ಲಾಮಿ ಸಮ್ಮೇಳನ: ಅತಿಥಿಯಾಗಿ ಡಾ.ಹುಸೈನ್ ಮಡವೂರು

Update: 2017-12-12 14:07 GMT

ಕಲ್ಲಿಕೋಟೆ, ಡಿ. 13: ಮದೀನಾದಲ್ಲಿ ಕಾರ್ಯಾಚರಿಸುತ್ತಿರುವ ಪ್ರಿನ್ಸ್ ನಾಯಿಫ್ ಬಿನ್ ಅಬ್ದುಲ್ ಅಝೀಝ್ ಫೌಂಡೇಶನ್ ಆಯೋಜಿಸಿರುವ ಜಾಗತಿಕ ಇಸ್ಲಾಮಿ ಸಮ್ಮೇಳನದ ಮುಖ್ಯ ಅತಿಥಿಯಾಗಿ ಇಂಡೋ-ಅರಬ್ ಲೀಗ್‍ನ ಮಹಾಕಾರ್ಯದರ್ಶಿ ಹಾಗೂ ಕೇರಳ ನದ್ವತ್ತುಲ್ ಮುಜಾಹಿದೀನ್ ‍ನ ರಾಜ್ಯ ಉಪಾಧ್ಯಕ್ಷ ಡಾ. ಹುಸೈನ್ ಮಡವೂರ್ ಭಾಗವಹಿಸಲಿದ್ದಾರೆ.

ಧಾರ್ಮಿಕ ರಂಗದ ವಿವಿಧ ಸ್ಥರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ವಿಶಿಷ್ಟ ವ್ಯಕ್ತಿಗಳಿಗೆ ಪುರಸ್ಕಾರ ನೀಡಿ ಗೌರವಿಸುವ ವಿಶೇಷ ಕಾರ್ಯಕ್ರಮದ ಅಂಗವಾಗಿ ಈ ಸಮ್ಮೇಳನವನ್ನು ಏರ್ಪಡಿಸಲಾಗಿದೆ.

ಡಾ. ಹುಸೈನ್ ಮಡವೂರು ಮೊದಲು ಮುಸ್ಲಿಮ್ ವರ್ಲ್ಡ್ ಲೀಗ್ ಮಕ್ಕಾದಲ್ಲಿ ಎರಡು ಬಾರಿ ಆಯೋಜಿಸಿದ್ದ ಜಾಗತಿಕ ಇಸ್ಲಾಮಿ ಸಮ್ಮೇಳನಗಳು ಮತ್ತು ಸೌದಿ ಅರೇಬಿಯಾದ ದಿ. ದೊರೆ ಅಬ್ದುಲ್ಲಾ ಅವರ ಆದೇಶದಂತೆ ನಡೆದ ಅಂತರ್‍ ಧರ್ಮೀಯ ಸಮ್ಮೇಳನ ಸಹಿತ ಸುಮಾರು 16 ರಾಷ್ಟ್ರಗಳಲ್ಲಿ ನಡೆದ ಜಾಗತಿಕ ಇಸ್ಲಾಮಿ ಸಮ್ಮೇಳನಗಳಲ್ಲಿ ಮಾತನಾಡಿದ್ದಾರಲ್ಲದೆ ವಿವಿಧ ವಿಷಯಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.

 ನಡೆಯುವ ಜಾಗತಿಕ ಇಸ್ಲಾಮಿ ಸಮ್ಮೇಳನದಲ್ಲಿ ಸೌದಿ ಸರಕಾರದ ಉನ್ನತ ಸಚಿವರು, ಗವರ್ನರ್‍ಗಳು, ಹರಮ್ ಶರೀಫ್‍ನ ಇಮಾಮರುಗಳು ಮತ್ತು ರಾಜ ಕುಟುಂಬದ ಮುಖ್ಯಸ್ಥರು ಭಾಗವಹಿಸುತ್ತಿದ್ದು, ಜಾಗತಿಕ ಮುಸ್ಲಿಮರ ಸ್ಥಿತಿಗತಿ ಮತ್ತು ಮಧ್ಯ ಪರಸ್ತ್ಯ ರಾಷ್ಟ್ರಗಳ ಪ್ರಚಲಿತ ವಿಧ್ಯಮಾನಗಳ ಕುರಿತು ವಿಸ್ತೃತ ಚರ್ಚೆಗಳು ನಡೆಯಲಿದೆಯೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News