ಸಿಕ್ಸರ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಗೇಲ್

Update: 2017-12-12 18:25 GMT

ಢಾಕಾ, ಡಿ.12: ವೆಸ್ಟ್‌ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಒಟ್ಟು 20 ಶತಕ ಸಿಡಿಸಿರುವ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಮಾತ್ರವಲ್ಲ ಇನಿಂಗ್ಸ್‌ವೊಂದರಲ್ಲಿ 18 ಸಿಕ್ಸರ್‌ಗಳನ್ನು ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದರು. ಬಾಂಗ್ಲಾದೇಶ ಪ್ರೀಮಿಯರ್ ಲೀಗ್(ಬಿಪಿಎಲ್) ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲಿ ಗೇಲ್ ಈ ಸಾಧನೆ ಮಾಡಿದ್ದಾರೆ. ಎಡಗೈ ದಾಂಡಿಗ ಗೇಲ್ ರಾಂಗ್‌ಪುರ್ ರೈಡರ್ಸ್ ವಿರುದ್ಧ ಢಾಕಾ ಡೈನಾಮೈಟ್ಸ್ ತಂಡದ ಪರ ಔಟಾಗದೆ 146 ರನ್(69 ಎಸೆತ,18 ಸಿಕ್ಸರ್,5 ಬೌಂಡರಿ) ಗಳಿಸಿದ್ದಾರೆ.

ಈ ಮೂಲಕ ಢಾಕಾ ತಂಡ 1 ವಿಕೆಟ್‌ಗಳ ನಷ್ಟಕ್ಕೆ 206 ರನ್ ಗಳಿಸಲು ನೆರವಾಗಿದ್ದಾರೆ. ಗೇಲ್ ಟೂರ್ನಿಯ ಎಲಿಮಿನೇಟರ್ ಸುತ್ತಿನಲ್ಲಿ ಅಜೇಯ 126 ರನ್ ಗಳಿಸಿದ್ದರು. ಗೇಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ್ದು, ಈ ಸಾಧನೆ ಮಾಡಿದ ಮೊದಲ ದಾಂಡಿಗ ಎನಿಸಿಕೊಂಡಿದ್ದಾರೆ. ಕಿವೀಸ್‌ನ ಮೆಕಲಮ್(8,526)2ನೇ ಆಟಗಾರನಾಗಿದ್ದಾರೆ. ಗೇಲ್ ಇನಿಂಗ್ಸ್‌ವೊಂದರಲ್ಲಿ 18 ಸಿಕ್ಸರ್‌ಗಳನ್ನು ಸಿಡಿಸಿದರು. ಇದರೊಂದಿಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಒಟ್ಟು 819 ಸಿಕ್ಸರ್‌ಗಳನ್ನು ಸಿಡಿಸಿದ ಸಾಧನೆ ಮಾಡಿದರು. ಈಗಾಗಲೇ 320 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಗೇಲ್ 40ರ ಸರಾಸರಿಯಲ್ಲಿ 150ರ ಸ್ಟ್ರೈಕ್‌ರೇಟ್‌ನಲ್ಲಿ 20 ಶತಕಗಳು ಹಾಗೂ 67 ಅರ್ಧಶತಕಗಳನ್ನು ಸಿಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News