ಬಿಸಿಸಿಐ ನಿರ್ಧಾರ ಸ್ವಾಗತಿಸಿದ ಸಿಒಎ

Update: 2017-12-12 18:32 GMT

ಹೊಸದಿಲ್ಲಿ, ಡಿ.12: ಅಫ್ಘಾನಿಸ್ತಾನ ವಿರುದ್ಧ ಮೊದಲ ಬಾರಿ ಟೆಸ್ಟ್ ಪಂದ್ಯ ಆತಿಥ್ಯವಹಿಸಿಕೊಳ್ಳುವ ಬಿಸಿಸಿಐ ನಿರ್ಧಾರವನ್ನು ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಅಧ್ಯಕ್ಷ ವಿನೋದ್ ರಾಯ್ ಮಂಗಳವಾರ ಸ್ವಾಗತಿಸಿದ್ದಾರೆ.

 ‘‘ಅಫ್ಘಾನಿಸ್ತಾನ ಕ್ರಿಕೆಟ್ ತಂಡದೊಂದಿಗೆ ಮೊದಲ ಬಾರಿ ಟೆಸ್ಟ್ ಪಂದ್ಯ ಆಡುವ ಮೂಲಕ ಆ ತಂಡಕ್ಕೆ ಸಹಾಯ ಹಸ್ತ ಚಾಚಲು ಒಪ್ಪಿಕೊಂಡಿರುವ ಬಿಸಿಸಿಐ ನಿರ್ಧಾರ ನನಗೆ ಖುಷಿ ತಂದಿದೆ. ಹೆಚ್ಚು ತಂಡಗಳು ಭಾಗವಹಿಸುವಿಕೆಯಿಂದ ಟೆಸ್ಟ್ ಕ್ರಿಕೆಟ್ ಮತ್ತಷ್ಟು ಶ್ರೀಮಂತವಾಗಲಿದೆ’’ ಎಂದು ರಾಯ್ ಹೇಳಿದ್ದಾರೆ.

ಬಿಸಿಸಿಐ ಸೋಮವಾರ ನಡೆದ ತನ್ನ ವಿಶೇಷ ಸಾಮಾನ್ಯ ಸಭೆಯಲ್ಲಿ ಭವಿಷ್ಯದ ಪ್ರವಾಸ ಕಾರ್ಯಕ್ರಮ(ಎಟಿಪಿ) ಪಟ್ಟಿಯನ್ನು ಅಂತಿಮಗೊಳಿಸಿದ್ದು, ಈ ವೇಳೆ ಅಫ್ಘಾನಿಸ್ತಾನ ತಂಡ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡುವ ನಿರ್ಧಾರ ಕೈಗೊಳ್ಳಲಾಗಿದೆ. ಯುದ್ಧದಿಂದ ಜರ್ಜರಿತ ದೇಶ ಅಫ್ಘಾನಿಸ್ತಾನ ಈ ವರ್ಷ ಜೂನ್‌ನಲ್ಲಿ ಐರ್ಲೆಂಡ್ ತಂಡದೊಂದಿಗೆ ಟೆಸ್ಟ್ ಸ್ಥಾನಮಾನ ಪಡೆದುಕೊಂಡಿತ್ತು. ಏಕದಿನ ಹಾಗೂ ಟ್ವೆಂಟಿ-20 ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ತನ್ನ ಕನಸನ್ನು ಈಡೇರಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News