ಅಂಬಿಕ

Update: 2017-12-14 18:36 GMT
Editor : -ಮಗು

ತುಂಬಿದ ದೋಣಿ ನದಿಯನ್ನು ದಾಟುತ್ತಿತ್ತು
ಅಂಬಿಗ ಯಾರನ್ನೋ ಸರಿಯಾಗಿ ಕುಳ್ಳಿರಿಸಲು ಯತ್ನಿಸಿದ ‘‘ನನ್ನನ್ನು ಮುಟ್ಟಬೇಡ. ಬಾಯಲ್ಲಿ ಹೇಳಿದರೆ ಸಾಕು...ನಿನ್ನದು ಕೆಳಜಾತಿ’’ ಹಿರಿಯ ಹೇಳಿದ
ಅಂಬಿಗ ನೊಂದುಕೊಂಡ.
ತುಸು ದೂರ ಸಾಗಿದಂತೆ ದೋಣಿ ಒಮ್ಮೆಗೆ ಮಗುಚಿದಂತಾಯಿತು. ಮೇಲ್ಜಾತಿಯ ಹಿರಿಯ ಜಾರಿ ನದಿಗೆ ಬಿದ್ದ
ಆತ ಈಜು ಬಾರದೆ ಬೊಬ್ಬಿಡತೊಡಗಿದ
‘‘ನನಗೆ ಈಜು ಬರುವುದಿಲ್ಲ. ನನ್ನನ್ನು ಮೇಲೆತ್ತು’’ ಅಂಬಿಗನಿಗೆ ಕೂಗಿ ಹೇಳಿದ.
‘‘ಸ್ವಾಮಿ ನನ್ನದು ಕೀಳು ಜಾತಿ...ಈಜುವುದನ್ನು ಬಾಯಲ್ಲೇ ಹೇಳಿಕೊಡುತ್ತೇನೆ ಆಗದೇ?’’ ಅಂಬಿಗ ಕೇಳಿದ.

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !