ವಿಶ್ವದ ಅತ್ಯಂತ ದೊಡ್ಡದಾದ, ಗಾಜಿನಿಂದ ನಿರ್ಮಿತ ನೀರಿನಡಿಯ ರೆಸ್ಟೋರಂಟ್ ಬಗ್ಗೆ ನಿಮಗೆಷ್ಟು ಗೊತ್ತು....?

Update: 2017-12-15 09:50 GMT

ಸಮುದ್ರದ ನೀರಿನಡಿ ಸುತ್ತಲೂ ಗಾಜಿನಿಂದಾವೃತ ರೆಸ್ಟೋರಂಟ್‌ನಲ್ಲಿ ಕುಳಿತುಕೊಂಡು ನೀರಿನಲ್ಲಿ ಚಲಿಸುತ್ತಿರುವ ಮೀನುಗಳನ್ನು ನೋಡುತ್ತ ಆಹಾರ ಸೇವಿಸುವ ಅನುಭವವೇ ಬೇರೆ. ಮಾಲ್ದೀವ್ಸ್‌ನಲ್ಲಿರುವ ವಿಶ್ವದ ಅತ್ಯಂತ ದೊಡ್ಡದಾದ, ಗಾಜಿನಿಂದ ನಿರ್ಮಿತ ವಾಗಿರುವ ನೀರಿನಡಿಯ ಹುರಾವಾಲ್ಹಿಸ್ ರೆಸ್ಟೋರಂಟ್ ನಿಮಗೆ ಈ ಅನುಭವವನ್ನು ನೀಡುತ್ತದೆ.

2016ರಲ್ಲಿ ಆರಂಭಗೊಂಡ ಈ ರೆಸ್ಟೋರಂಟ್ ಸಮುದ್ರದ ಮೇಲ್ಮೈಯಿಂದ 5.8 ಮೀಟರ್(ಸುಮಾರು 19 ಅಡಿ) ಕೆಳಗಿದೆ. ಈ ಬೃಹತ್ ನಿರ್ಮಾಣವು ಬರೋಬ್ಬರಿ 400 ಮೆ.ಟನ್ ತೂಗುತ್ತಿದ್ದು, 90 ಚ.ಮೀಟರ್ ವಿಸ್ತೀರ್ಣವನ್ನು ಹೊಂದಿದೆ.

ರೆಸಾರ್ಟ್‌ನ ನೀರಿನ ಮೇಲಿರುವ ಅಕ್ವೇರಿಯಂ ರೆಸ್ಟೋರಂಟ್‌ನ ಮೂಲಕ ಮೆಟ್ಟಿಲುಗಳನ್ನು ಇಳಿದು ಈ ನೀರಿನಡಿಯ ರೆಸ್ಟೋರಂಟ್‌ನ್ನು ಪ್ರವೇಶಿಸಬಹುದಾಗಿದೆ. ರೆಸ್ಟೋರಂಟ್‌ನಲ್ಲಿ ಒಪ್ಪವಾಗಿ ಜೋಡಿಸಿಡಲಾಗಿರುವ ಟೇಬಲ್‌ಗಳಿಂದ ಹೊರಗಿನ ರಮಣೀಯ ದೃಶ್ಯಗಳನ್ನು ಆಸ್ವಾದಿಸಬಹುದಾಗಿದೆ.

ಮಾಂಸ ಮತ್ತು ಮೀನು ಸೇರಿದಂತೆ ವಿವಿಧ ರುಚಿಕರ ಆಹಾರಗಳು ಈ ರೆಸ್ಟೋರಂಟ್‌ನಲ್ಲಿ ಲಭ್ಯವಿವೆ. ಜೊತೆಗೆ ಗ್ರ್ರಾಹಕರಿಗೆ ರುಚಿಕಟ್ಟಾದ ವೈನ್‌ನ್ನೂ ಒದಗಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News