ವಿವಿಧ ಯೋಜನೆಗಳಿಗೆ ನೆರವು ಘೋಷಿಸಿದ ಸೌದಿ ದೊರೆ

Update: 2017-12-15 11:33 GMT

ಜಿದ್ದಾ, ಡಿ.15: ಸೌದಿ ಅರೇಬಿಯದ ಖಾಸಗಿ ಕ್ಷೇತ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಲಿಕ್ಕಾಗಿ 2 ಶತಕೋಟಿ ರಿಯಾಲ್‍ನ ವಿಶೇಷ ಪ್ರೋತ್ಸಾಹ ನಿಧಿಯನ್ನು ಘೋಷಿಸಿಲಾಗಿದೆ. ಗುರವಾರ ಬೆಳಗ್ಗೆ ಹೊರಡಿಸಿದ ದೊರೆಯ  ಆದೇಶದಲ್ಲಿ ಇದು ಸಹಿತ ಹಲವಾರು ಯೋಜನೆಗಳು ಮತ್ತು ಅದಕ್ಕೆ ಅಗತ್ಯಸಹಾಯವನ್ನು ದೊರೆ ಸಲ್ಮಾನ್  ಘೋಷಿಸಿದ್ದಾರೆ. ಯುವರಾಜ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್‍ರ ಶಿಫಾರಸುಗಳ ಆಧಾರದಲ್ಲಿ ಘೋಷಣೆಗಳನ್ನು ಮಾಡಲಾಯಿತು ಎಂದು  ಸೌದಿ ಅರೇಬಿಯದ ಅಧಿಕೃತ  ಸುದ್ದಿ ಸಂಸ್ಥೆ ತಿಳಿಸಿದೆ. ತೈಲದರ ಕುಸಿತದ ನಂತರ ಉಂಟಾದ ಆರ್ಥಿಕ ಹಿನ್ನೆಡೆಯನ್ನು  ಮೀರಿ ನಿಲ್ಲಲು ಕೈಗೊಳ್ಳುತ್ತಿರುವ ಆರ್ಥಿಕ ಸುಧಾರಣೆಯ ಕ್ರಮದ ಹಿನ್ನೆಲೆಯಲ್ಲಿ ಖಾಸಗಿ ಕ್ಷೇತ್ರಕ್ಕೆ ಸಹಾಯಹಸ್ತವನ್ನು ದೊರೆ ನೀಡಿದ್ದಾರೆ.

ಒಟ್ಟು 16 ವಿಭಾಗಗಳಿಗೆ ಧನಸಹಾಯ ದೊರೆಯಲಿದೆ. ನಾಗರಿಕ ವಸತಿ ಸಬ್ಸಿಡಿಗೆ 570 ಕೋಟಿ ರಿಯಾಲ್ ಮೀಸಲಿರಿಸಲಾಗಿದೆ. 800 ಕೋಟಿರಿಯಾಲ್‍ನ ಮೂಲಬಂಡವಾಳದಲಿ ಆರಂಭಗೊಳ್ಳಲಿರುವ ಎಕ್ಸ್‍ಪೋರ್ಟ್ ಪ್ರಮೋಟ್ ಫಂಡ್‍ಗೆ ಮೊದಲ ಹಂತದ ಮೊತ್ತ 133 ಕೋಟಿ ಡಾಲರ್ ನೀಡಲಾಗಿದೆ. ಈ ಫಂಡ್ ಕುರಿತು ಕಳೆದ ದಿನ ಇಂಧನ ಸಚಿವ ಇಂಜಿನಿಯರ್ ಖಾಲಿದ್ ಅಲ್‍ಫಲಾಹ್ ಸೂಚನೆ ನೀಡಿದ್ದರು. ನಾಗರಿಕರ ಹೌಸಿಂಗ್ ಸಾಲ ಯೋಜನೆಗೆ 213 ಕೋಟಿ ರಿಯಾಲ್, ಸಣ್ಣಮತ್ತು ಮಧ್ಯಂತರ ಉದ್ಯಮಗಳಿಗೆ ಪರೋಕ್ಷ ಸಹಾಯ ನೀಧಿಯಾಗಿ 160 ಕೋಟಿ ರಿಯಾಲ್ ಮೀಸಲಿರಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News