11 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ: ಆಸ್ತಿ ವಿವರ ಬಹಿರಂಗ

Update: 2017-12-15 16:18 GMT
ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿ

ಬೆಂಗಳೂರು, ಡಿ.15: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪದಲ್ಲಿ ರಾಜ್ಯ ವಿವಿಧ ಕಡೆ, ಬೇರೆ ಬೇರೆ ಇಲಾಖೆಗಳ 11 ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ದಾಳಿ ನಡೆಸಿದ ಪ್ರಕರಣ ಸಂಬಂಧ ಶುಕ್ರವಾರ ಅಧಿಕಾರಿಗಳ ಆಸ್ತಿ-ಪಾಸ್ತಿಗಳ ವಿವರ ಬಹಿರಂಗಗೊಂಡಿದೆ.

► ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಫ್ರಾನ್ಸಿಸ್ ಪೌಲ್ ಮಿರಾಂಡಾ ಅವರ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದಾಗ, 7 ನಿವೇಶನ, 12 ಎಕರೆ ಭೂಮಿ, 1 ಅಪಾರ್ಟ್‌ಮೆಂಟ್, 2 ಕಾರು, 1 ಮೋಟಾರ್ ಬೈಕ್, ಬ್ಯಾಂಕಿನಲ್ಲಿ 15 ಲಕ್ಷ ರೂ. ಮೌಲ್ಯದ ಎಲ್‌ಐಸಿ.

 250 ಗ್ರಾಂ ಚಿನ್ನ, 1 ಕೆ.ಜಿ ಬೆಳ್ಳಿ, 5 ಲಕ್ಷ ರೂ. ಮೌಲ್ಯದ ಗೃಹ ಬಳಕೆ ವಸ್ತುಗಳು, 5 ಲಕ್ಷ ರೂ. ನಗದು, ಬ್ಯಾಂಕ್ ಖಾತೆಗಳಲ್ಲಿ 56 ಲಕ್ಷ ನಗದು, ಫೌರ್ಮ್‌ಹೌಸ್ ನವೀಕರಣಕ್ಕೆ 20 ಲಕ್ಷ ರೂ. ಖರ್ಚು ಮಾಡಿರುವ ಮಾಹಿತಿ ದೊರೆತಿದೆ.

► ಬಳ್ಳಾರಿ ಪ್ರದೇಶ ಅಭಿವೃದ್ದಿ ಆಯುಕ್ತ ಎಸ್. ಪಾಷಾವಲಿ ಬಳಿ, ಬಳ್ಳಾರಿಯ ವಿವಿಧ ಸ್ಥಳಗಳಲ್ಲಿ 3 ಮನೆ, 5 ನಿವೇಶನ, ಒಂದಿ ಕೈಗಾರಿಕಾ ಶೆಡ್, 1 ನಿರ್ಮಾಣ ಹಂತದ ಮನೆ, 3.13 ಎಕರೆ ಜಮೀನು, 1ಕಾರು, 3 ಬೈಕ್, 370 ಗ್ರಾಂ ಚಿನ್ನ, 1 ಕೆ.ಜಿ ಬೆಳ್ಳಿ ವಸ್ತುಗಳು, 10 ಲಕ್ಷ ಗೃಹ ಬಳಕೆ ವಸ್ತುಗಳು, 58 ಸಾವಿರ ನಗದು ಇರುವುದಾಗಿ ಎಸಿಬಿ ಹೇಳಿದೆ.

► ಕಲಬುರಗಿ ಸಣ್ಣ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಎಚ್.ಬಿ ಮಲ್ಲಪ್ಪ ಬಳಿ, 4 ವಾಸದ ಮನೆಗಳು, 1 ಖಾಲಿ ನಿವೇಶನ, 1 ಫಾರಂಹೌಸ್, 31 ಎಕರೆ ಜಮೀನು, 3 ಕಾರು, 1 ಟ್ರ್ಯಾಕ್ಟರ್, 4 ಸಣ್ಣಮೋಟಾರ್ ಬೈಕ್, 1.3 ಕೆ.ಜಿ ಚಿನ್ನ, 6 ಕೆ.ಜಿ ಬೆಳ್ಳಿ,5 ಲಕ್ಷ ರೂ. ಮೌಲ್ಯದ ಗೃಹ ಬಳಕೆ ವಸ್ತುಗಳು, 23 ಲಕ್ಷ ರೂ. ನಗದು ಇರುವ ಆಸ್ತಿ ವಿವರ ದೊರೆತಿದೆ.

► ಬೆಂಗಳೂರಿನ ಕಾರ್ಮಿಕ ಭವನದ ಫ್ಯಾಕ್ಟರಿ ಮತ್ತು ಬಾಯ್ಲರ್‌ನ ಜಂಟಿ ನಿರ್ದೇಶಕ ಡಸ್.ಎಂ ವಾಸಣ್ಣ, ಮೈಸೂರು, ದಾವಣಗೆರೆ, ಬೆಂಗಳೂರಿನಲ್ಲಿ 3 ವಾಸದ ಮನೆಗಳು, ಕಡೂರು ಮತ್ತು ಅನೇಕಲ್‌ನಲ್ಲಿ 3 ನಿವೇಶನ, ತರೀಕೆರೆಯಲ್ಲಿ 2ಎಕರೆ 23 ಗುಂಟೆ ಜಮೀನು, 1 ಕಾರು, 2 ಬೈಕ್, ಎಲ್‌ಐಸಿ ಮತ್ತು ಬ್ಯಾಂಕ್ ಠೇವಣಿಗಳಲ್ಲಿ 15 ಲಕ್ಷ, 400 ಗ್ರಾಂ ಚಿನ್ನ, 3.5 ಕೆ.ಜಿ ಬೆಳ್ಳಿ, 13 ಲಕ್ಷ ರೂ. ಗೃಹ ಬಳಕೆ ವಸ್ತು, 7 ಲಕ್ಷ ರೂ. ಇರುವ ಆಸ್ತಿ ವಿವರ ದೊರೆತಿದೆ.

► ಚಿಕ್ಕಬಳ್ಳಾಪುರ ಸಣ್ಣ ನೀರಾವರಿ ಇಲಾಖೆ ಎಇಇ ಡಿ. ಹೇಮಂತ್ 1 ಮನೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 4 ನಿವೇಶನ, ನೆಲಮಂಗಲದಲ್ಲಿ 7 ನಿವೇಶನ ಮತ್ತು 2 ಎಕರೆ ಜಮೀನು, ಶೀಡ್ಲಘಟ್ಟದಲ್ಲಿ 7.5 ಎಕರೆ ಜಮೀನು, 2 ಕಾರು, 1 ಬೈಕ್, 680 ಗ್ರಾಂ ಚಿನ್ನ, 3 ಕೆ.ಜಿ ಬೆಳ್ಳಿ, 2.49 ಲಕ್ಷ ರೂ. ನಗದು ಇರುವ ಆಸ್ತಿ ವಿವರ ದೊರೆತಿದೆ.

► ಕೊರಟಗೆರೆ ಲೋಕೋಪಯೋಗಿ ಇಲಾಖೆ ಎಇಇ ಜೆ.ಸಿ ಜಗದೀಶ್, ವಿವಿಧ ಸ್ಥಳಗಳಲ್ಲಿ 12 ನಿವೇಶನ, 50 ಲಕ್ಷ ರೂ. ಮೌಲ್ಯದ ಮನೆ, 2 ಎಕರೆ ಜಮೀನು, 450 ಗ್ರಾಂ ಚಿನ್ನ, 115 ಗ್ರಾಂ ಬೆಳ್ಳಿ, 6.5 ಲಕ್ಷ ರೂ. ಗೃಹ ಬಳಕೆ ವಸ್ತುಗಳು, 1 ಕಾರು, 3 ದ್ವಿಚಕ್ರವಾಹನ ಮತ್ತು 1.38 ಲಕ್ಷ ನಗದು ಇರುವ ಆಸ್ತಿ ವಿವರ ದೊರೆತಿದೆ.

► ಬೆಂಗಳೂರಿನ ಡೈರೆಕ್ಟರೇಟ್ ಆಫ್ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಜಂಟಿ ನಿರ್ದೇಶಕ ಎಂ.ಸಿ ಶಶಿಕುಮಾರ್, ಮೈಸೂರಿನಲ್ಲಿ 1 ಮನೆ, 1 ಕಾರು, 1 ಬೈಕ್, 60 ಲಕ್ಷ ರೂ. ಬ್ಯಾಂಕ್ ಠೇವಣಿ, 1.5 ಕೆ.ಜಿ ಚಿನ್ನ, 6 ಕೆ.ಜಿ ಬೆಳ್ಳಿ, ಬ್ಯಾಂಕ್ ಖಾತೆಗಳಲ್ಲಿ 50 ಲಕ್ಷ ರೂ., 1.66 ಲಕ್ಷ ರೂ. ನಗದು ಇರುವ ಆಸ್ತಿ ವಿವರ ದೊರೆತಿದೆ.

► ಮಂಡ್ಯ ಜಿ.ಪಂನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಡಿಪಾರ್ಟ್‌ಮೆಂಟ್‌ನ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಹಾಸ್, ಮಂಡ್ಯದ ವಿವಿಧ ಸ್ಥಳಗಳಲ್ಲಿ 2 ಮನೆ, ಕುದುರೆಗುಂಡಿ ಗ್ರಾಮದಲ್ಲಿ 1 ಮನೆ, ಮಂಡ್ಯದಲ್ಲಿ 2 ಗುಂಟೆ ನಿವೇಶನ, ಹುಣಸೂರಿನಲ್ಲಿ 1 ನಿವೇಶನ, ಬಳ್ಳಾರಿ ಟೌನ್‌ನಲ್ಲಿ 2.75 ಸೆಂಟ್ ನಿವೇಶನ, ಗೆಜ್ಜಲಗೆರೆ ಗ್ರಾಮದಲ್ಲಿ 18 ಗುಂಟೆ ಜಮೀನು, 1 ಕಾರು 2 ಮೋಟಾರ್ ಬೈಕ್,500 ಗ್ರಾಂ ಚಿನ್ನ, 1,5 ಕೆ.ಜಿ ಬೆಳ್ಳಿ 83 ಸಾವಿರ ನಗದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 8.5 ಲಕ್ಷ ರೂ. ಇರುವ ಆಸ್ತಿ ವಿವರ ದೊರೆತಿದೆ.

► ಅಂಕೋಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಂಡುರಂಗ ಕೆ. ಪೈ, ಧಾರವಾಡದಲ್ಲಿ 1 ಮನೆ, ಬಿಜೂರು ಮತ್ತು ಧಾರವಾಡದಲ್ಲಿ 6.5 ಎಕರೆ ಕೃಷಿ ಜಮೀನು, 2 ಕಾರು, 2 ಬೈಕ್, 826 ಗ್ರಾಂ ಚಿನ್ನ, 2.4 ಮೌಲ್ಯದ ಡೈಮಂಡ್ ನೆಕ್ಲೇಸ್, 5.58 ಕೆ.ಜಿ ಬೆಳ್ಳಿ, 14.22 ಲಕ್ಷ ರೂ. ಮೌಲ್ಯದ ಬ್ಯಾಂಕ್ ಠೇವಣಿ ರಶೀದಿ, 84 ಸಾವಿರ ನಗದು ಇರುವ ಆಸ್ತಿ ವಿವರ ದೊರೆತಿದೆ.

► ಬೆಳಗಾವಿ ಲೋಕೋಪಯೋಗಿ ಇಲಾಖೆ ಎಇಇ ಭೀಮಾ ನಾಯ್ಕ, ಬೆಳಗಾವಿಯ ವಿವಿಧೆಡೆ 3 ಮನೆ, ಖಾನಪುರದ ಮುದ್ದೆಕೊಪ್ಪದಲ್ಲಿ 10 ಎಕರೆ ಪೌಲ್ಟ್‌ರೀ ಫಾರಂ, ಚಿಕ್ಕೋಡಿಯಲ್ಲಿ 15 ಎಕರೆ ಜಮೀನು, 2 ಕಾರು, 2 ಮೋಟಾರು ಬೈಕ್ ಮತ್ತು 1 ಟ್ರಾಕ್ಟರ್, 300 ಗ್ರಾಂ ಚಿನ್ನ, 48 ಸಾವಿರ ನಗದು ಪತ್ತೆಯಾಗಿದೆ ಇರುವ ಆಸ್ತಿ ವಿವರ ದೊರೆತಿದೆ.

► ಬೆಂಗಳೂರಿನ ಡೈರೆಕ್ಟರೇಟ್ ಆಫ್ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಜಂಟಿ ನಿರ್ದೇಶಕ ಎಂ.ಸಿ ಶಶಿಕುಮಾರ್, ಶಿವಮೊಗ್ಗದಲ್ಲಿ 4 ಮನೆ, ಚಿಕ್ಕಮಗಳೂರಿನಲ್ಲಿ 1 ಮನೆ ,ದಾವಣಗೆರೆಯಲ್ಲಿ 8 ಎಕರೆ ಜಮೀನು, 2 ಕಾರು, 3 ಮೋಟರ್ ಬೈಕ್, 400 ಗ್ರಾಂ ಚಿನ್ನ, 800 ಗ್ರಾಂ ಬೆಳ್ಳಿ, 1.66 ಲಕ್ಷ ರೂ. ನಗದು ಇರುವ ಆಸ್ತಿ ವಿವರ ದೊರೆತಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News