ಗುಜರಾತ್ :ಹಾಲಿ ಸ್ಪೀಕರ್ ಬಿಜೆಪಿಯ ಗಣಪತಿ ವಸಾವ್ ಗೆ ಸೋಲು

Update: 2017-12-18 06:51 GMT

ಹೊಸದಿಲ್ಲಿ, ಡಿ.18: ಗುಜರಾತ್  ಮತ್ತು ಹಿಮಾಚಲ ಪ್ರದೇಶ ಚುನಾವಣೆಯ  ಫಲಿತಾಂಶ ಪ್ರಕಟಗೊಂಡಿದ್ದು, ಗುಜರಾತ್ ನ 

ಹಾಲಿ ಸ್ಪೀಕರ್ ಬಿಜೆಪಿಯ ಗಣಪತಿ ವಸಾವ್  ಅವರು ಮಂಗ್ರೋಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ನಂದರಿ ಭಾಯ್ ವಸಾವ್ ವಿರುದ್ಧ ಸೋಲು ಅನುಭವಿಸಿದ್ದಾರೆ

ರಾಧನ್ಪುರ ಕ್ಷೇತ್ರ ದ ಕಾಂಗ್ರೆಸ್ ನ  ಅಲ್ಪೇಶ್  ಠಾಕೂರ್ ಹಾಗೂ  ವಡ್ಗಂ ಕ್ಷೇತ್ರದಲ್ಲಿ ಪಕ್ಷೇತರ  ಅಭ್ಯರ್ಥಿ ಜಿಗ್ನೇಶ್ ಮೇವಾನಿಗೆ ಭರ್ಜರಿ ಜಯ ಗಳಿಸಿದ್ದಾರೆ. 

ಗುಜರಾತ್ ನ  ರಾಜ್ ಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಮುಖ್ಯ ಮಂತ್ರಿ ಬಿಜೆಪಿಯ ವಿಜಯ್ ರೂಪಾನಿ ಅವರು ಕಾಂಗ್ರೆಸ್ ನ ಇಂದ್ರನೀಲ್ ರಾಜ ಗುರು  ವಿರುದ್ಧ ಜಯ ಗಳಿಸಿದ್ದಾರೆ.  ಇಂದ್ರ ನೀಲ್ ಗುಜರಾತ್ ನ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಆದರೆ ಅವರು ಕ್ಷೇತ್ರ ಬದಲಿಸಿ ರೂಪಾನಿ  ಅವರನ್ನು ಸೋಲಿಸುವ ಸವಾಲಿನೊಂದಿಗೆ ಕಣಕ್ಕಿಳಿದಿದ್ದರು. ಆದರೆ ಅವರಿಗೆ ಸೋಲಾಗಿದೆ.

ಪೋರ್ ಬಂದರ್ ನಲ್ಲಿ ಕಾಂಗ್ರೆಸ್ ನ ಮುಖ್ಯ ಮಂತ್ರಿ ಅಭ್ಯರ್ಥಿ ಅರ್ಜುನ್ ಮೊದ್ವಾಡಿಯಾ ಸೋಲು ಅನುಭವಿಸಿದ್ದಾರೆ. ಬಿಜೆಪಿಯ ಬಾಬು ಬೊಖಿರಿಯಾ ಅವರು ಅರ್ಜುನ್ ಗೆ ಸೋಲುಣಿಸಿದರು.

ಭಾವ್ ನಗರ ಪಶ್ಚಿಮದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಜೀತು ಭಾಯ್ ವಘಾನಿ ಜಯ ಗಳಿಸಿದ್ದಾರೆ. ಮಾಂಡೇವಿ ವಿಭಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ  ಶಕ್ತಿ ಸಿನ್ಹಾ ಗೋಯೆಲ್ ಸೋತಿದ್ದಾರೆ.

ನಿತಿನ್ ಪಟೇಲ್ ಗೆ ಜಯ: ಮೆಹ ಸಾನ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಜಿವೋ ಭಾಯ್ ಪಟೇಲ್ ವಿರುದ್ಧ ಉಪ ಮುಖ್ಯ ಮಂತ್ರಿ ನಿತಿನ್ ಪಟೇಲ್ ಜಯ ಗಳಿಸಿದರು.

ಎಲ್ಲಿಸ್ ಬ್ರಿಡ್ಜ್ ಕ್ಷೇತ್ರದಲ್ಲಿ ಬಿಜೆಪಿಯ ರಾಕೇಶ್ ಶಾ,  ಅಹ್ಮದಾಬಾದ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಇಮ್ರಾನ್ ಖೇಡಾವಾಲಾ  ಜಯ ಗಳಿಸಿದ್ದಾರೆ.

ಪ್ರಧಾನಿ ಮೋದಿ ಮೂರು ಬಾರಿ ಪ್ರತಿನಿಧಿಸಿದ್ದ  ಮಣಿನಗರ ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ್ ಪಟೇಲ್ ಅವರು ಕಾಂಗ್ರೆಸ್ ನ ಶ್ವೇತಾ ಬ್ರಹ್ಮ ಭಟ್ ವಿರುದ್ಧ ಜಯ ಗಳಿಸಿದರು. 

ಪಟೇಲ್ ಪ್ರಾಬಲ್ಯದ 37 ಕ್ಷೇತ್ರಗಳ ಪೈಕಿ 21ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಮತ ಎಣಿಕೆ ಸ್ಥಗಿತ: ರಾಜ್ ಕೋಟ್  ಪೂರ್ವ ಕ್ಷೇತ್ರದ ಮತಗಟ್ಟೆಯ  ಇವಿಎಂ ಯಂತ್ರದ ಸೀಲು ತಿರುಚಿದ ಹಿನ್ನೆಲೆಯಲ್ಲಿ ಮತ ಎಣಿಕೆ ಸ್ಥಗಿತಗೊಳಿಸಲಾಗಿದೆ.

 ಹಿಮಾಚಲ ಪ್ರದೇಶ ಬಿಜೆಪಿ ಸಿಎಂ  ಅಭ್ಯರ್ಥಿ  ಧುಮಾಲ್ ಗೆ ಸೋಲು: ಹಿಮಾಚಲ ಪ್ರದೇಶದ ಬಿಜೆಪಿ ಮುಖ್ಯ ಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಅವರು ಸುಜನ್ ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರಾಜೀಂದರ್  ರಾಣಾ ವಿರುದ್ಧ ಸೋಲು ಅನುಭವಿಸಿದ್ದಾರೆ.

 ಬಿಜೆಪಿಯ ರವೀಂದ್ರ ಕುಮಾರ್ ಅವರು ಜಯಸಿಂಗ್ ಕ್ಷೇತ್ರದಲ್ಲಿ ಮತ್ತು ಕಸುಂತೀ ಕ್ಷೇತ್ರದಲ್ಲಿ ಕಾಂಗ್ರೆಸ್ ನ 

ಅನಿರುದ್ಧ್ ಸಿಂಗ್  ಜಯ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News