ಉತ್ತಮ ಆಡಳಿತ, ಅಭಿವೃದ್ಧಿಗೆ ಜನರು ಬೆಂಬಲ ನೀಡಿದ್ದಾರೆ : ಪ್ರಧಾನಿ ಮೋದಿ

Update: 2017-12-18 12:44 GMT

ಅಹ್ಮದಾಬಾದ್, ಡಿ.18 : ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಜನರು  ಬೆಂಬಲ ತೋರಿಸಿದ್ದಾರೆಂದು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳ ಫಲಿತಾಂಶಗಳು ಸಾಬೀತು ಪಡಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿ ಎರಡೂ ರಾಜ್ಯಗಳ ಜನರ ಸೇವೆಗೆ ಅವಿರತ ಶ್ರಮಪಡುವುದು ಎಂಬ ಭರವಸೆಯನ್ನೂ ಪ್ರಧಾನಿ ನೀಡಿದ್ದಾರೆ.

‘‘ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನರು ಬಿಜೆಪಿ ಮೇಲಿಟ್ಟ ಪ್ರೀತಿ ಮತ್ತು ವಿಶ್ವಾಸಕ್ಕೆ ಅವರಿಗೆ ವಂದಿಸುತ್ತೇನೆ. ಪಕ್ಷದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ನಾನು ಧನ್ಯವಾದ ತಿಳಿಸುತ್ತೇನೆ,’’ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಬಿಜೆಪಿಗೆ ಈ ಬಾರಿ ಗುಜರಾತ್ ರಾಜ್ಯದಲ್ಲಿ ಕಠಿಣ ಸವಾಲೊಡ್ಡಿತ್ತೇ ಎಂದು ಕೇಂದ್ರ  ಸಚಿವೆ ಸ್ಮೃತಿ ಇರಾನಿ ಅವರನ್ನು ಪ್ರಶ್ನಿಸಿದಾಗ ‘‘ಜೋ ಜೀತಾ ವೊಹೀ ಸಿಕಂದರ್’’ ಎಂದು ಬಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News