ಅಲ್ಪಸಂಖ್ಯಾತರ ಸಭೆಗೆ ಕ್ರಿಶ್ಚಿಯನ್ ಪ್ರತಿನಿಧಿಗಳ ನಿರ್ಲಕ್ಷ : ನಿರಾಸೆ ಸೂಚಿಸಿದ ಸಾಮಾಜಿಕ ಕಾರ್ಯಕರ್ತ

Update: 2017-12-18 16:44 GMT

ಬೆಂಗಳೂರು, ಡಿ.18: ಕರ್ನಾಟಕ ರಾಜ್ಯ ಸರಕಾರ ನಡೆಸುವ ಅಲ್ಪಸಂಖ್ಯಾತರ ಸಭೆಗೆ ಕ್ರೈಸ್ತ ಮುಖಂಡರನ್ನು ಹಾಗೂ ಕ್ರೈಸ್ತ ಸಮಾಜದ ಸಕ್ರಿಯ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತಿಲ್ಲ ಎಂದು ಸಮಾಜ ಸೇವಕ ಆ್ಯಗ್ನೆಲ್ ರಾಜೇಂದ್ರನ್ ಬೇಸರ ವ್ಯಕ್ತಪಡಿಸಿದ್ದಾರೆ.

  ಡಿ.18ರ ವಿಶ್ವ ಅಲ್ಪಸಂಖ್ಯಾತರ ದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸಭೆ ನಡೆದಿದ್ದು ಇದಕ್ಕೆ ಕ್ರೈಸ್ತ ಮುಖಂಡರು ಅಥವಾ ಕ್ರೈಸ್ತ ಸಮಾಜದ ಸಕ್ರಿಯ ಸಮಾಜಸೇವಕರನ್ನು ಆಹ್ವಾನಿಸಿಲ್ಲ. ಇದಕ್ಕೂ ಮುನ್ನ ಡಿ.13ರಂದು ಬೆಂಗಳೂರಿನ ಅರಮನೆ ಮೈದಾನದ ಟೆನಿಸ್ ಪೆವಿಲಿಯನ್‌ನಲ್ಲಿ ಸರಕಾರದ ವತಿಯಿಂದ ನಡೆದಿದ್ದ ಅಲ್ಪಸಂಖ್ಯಾತರ ಕುಂದುಕೊರತೆ ಅಹವಾಲು ಸಭೆಗೂ ಆಹ್ವಾನಿಸಲಾಗಿಲ್ಲ ಎಂದವರು ಅಳಲು ತೋಡಿಕೊಂಡರು.

   ಡಿ.18ರಂದು ನಡೆದಿದ್ದ ಸಭೆಯಲ್ಲಿ 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಆದರೆ ಕ್ರಿಶ್ಚಿಯನ್ನರನ್ನು ಕಡೆಗಣಿಸಲಾಗಿತ್ತು ಮತ್ತು ಅಲ್ಪಸಂಖ್ಯಾತ ಸಮುದಾಯದ ಒಂದು ವಿಭಾಗಕ್ಕೆ ಮಾತ್ರ ಪ್ರಾಶಸ್ತ್ಯ ನೀಡಲಾಗಿತ್ತು ಎಂದಿರುವ ರಾಜೇಂದ್ರನ್, ಸರಕಾರವು ಕ್ರೈಸ್ತ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ಮುಂದಾಗುವ ಮೂಲಕ ಉತ್ತಮ ಆಡಳಿತದ ನಿರ್ದಶನವನ್ನು ಅನುಸರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News