ಫರ್ಹಾಗೆ ಬಿಬಿಸಿ ಕ್ರೀಡಾ ಸಾಧಕ ಪ್ರಶಸ್ತಿ

Update: 2017-12-18 18:31 GMT

ಲಂಡನ್, ಡಿ.18: ಬ್ರಿಟನ್‌ನ ಒಲಿಂಪಿಯನ್ ಹಾಗೂ ವಿಶ್ವ ಚಾಂಪಿಯನ್ ಅಥ್ಲೀಟ್ ಮೊ ಫರ್ಹಾ ಬಿಬಿಸಿ ವರ್ಷದ ಕ್ರೀಡಾ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರವಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ದೂರ ಅಂತರದ ಓಟಗಾರ ಫರ್ಹಾ ಈ ವರ್ಷ ಆರನೇ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಸೂಪರ್‌ಬೈಕ್ ರೈಡರ್ ಜೋನಾಥನ್ ಹಾಗೂ ಪ್ಯಾರಾ ಅಥ್ಲೀಟ್ ಜಾನ್ನಿ ಪೀಕಾಕ್‌ರನ್ನು ಪ್ರಶಸ್ತಿ ಸ್ಪರ್ಧೆಯಲ್ಲಿ ಹಿಂದಿಕ್ಕಿದರು.

ಸೊಮಾಲಿಯಾದಲ್ಲಿ ಜನಿಸಿರುವ ಫರ್ಹಾ ತನ್ನ 8ನೇ ವಯಸ್ಸಿನಲ್ಲಿ ಬ್ರಿಟನ್‌ಗೆ ವಲಸೆ ಬಂದಿದ್ದರು. 2012 ಹಾಗೂ 2016ರ ಒಲಿಂಪಿಕ್ಸ್‌ನಲ್ಲಿ 5,000 ಹಾಗೂ 10,000 ಮೀ. ಓಟದಲ್ಲಿ ಚಿನ್ನ ಜಯಿಸಿದ್ದ ಫರ್ಹಾ ಆರು ಬಾರಿ ವಿಶ್ವ ಚಾಂಪಿಯನ್‌ಶಿಪ್ ಜಯಿಸಿದ್ದರು.

ವರ್ಷದ ವಿದೇಶಿ ಕ್ರೀಡಾ ಸಾಧಕ ಪ್ರಶಸ್ತಿ ಸ್ವಿಸ್‌ನ ರೋಜರ್ ಫೆಡರರ್ ಪಾಲಾಯಿತು. 8ನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದ ಫೆಡರರ್ ಈ ತನಕ 19 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News