ದಿಲ್ಲಿ: ಪ್ರಾಯೋಗಿಕ ಓಡಾಟದ ವೇಳೆ ಗೋಡೆಗೆ ಅಪ್ಪಳಿಸಿದ ಚಾಲಕರಹಿತ ಮೆಟ್ರೋ ರೈಲು

Update: 2017-12-19 14:44 GMT

ಹೊಸದಿಲ್ಲಿ, ಡಿ.19: ಪ್ರಾಯೋಗಿಕ ಓಡಾಟದ ಸಂದರ್ಭ ಚಾಲಕರಹಿತ ಮೆಟ್ರೋ ರೈಲೊಂದು ಗೋಡೆಗೆ ಅಪ್ಪಳಿಸಿದ ಘಟನೆ ದಿಲ್ಲಿಯಲ್ಲಿ ನಡೆದಿದೆ.

“ರೈಲಿನ ನಿರ್ವಹಣೆಯನ್ನು ನಡೆಸುತ್ತಿದ್ದ ಸಿಬ್ಬಂದಿ ಬ್ರೇಕ್ ಪರಿಶೀಲಿಸಿಲ್ಲ. ರ್ಯಾಂಪ್ ಬಳಿ ರೈಲನ್ನು ನಿಲ್ಲಿಸಲು ಪ್ರಯತ್ನಿಸಲಾಯಿತಾದರೂ ಬ್ರೇಕ್ ಸಿಗಲಿಲ್ಲ. ಇದರಿಂದಾಗಿ ಅಪಘಾತ ಸಂಭವಿಸಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದಾಗ ರೈಲಿನಲ್ಲಿ ಯಾರೂ ಪ್ರಯಾಣಿಕರಿರಲಿಲ್ಲ. ತಪ್ಪು ಹಾಗು ನಿರ್ಲಕ್ಷ್ಯದಿಂದ ಅಫಘಾತ ಸಂಭವಿಸಿದೆ ಎಂದು ಡಿಎಂಆರ್ ಸಿ ಹೇಳಿದ್ದು, ಮೂರು ಸದಸ್ಯರ ಸಮಿತಿ ಉನ್ನತ ಮಟ್ಟದ ತನಿಖೆ ನಡೆಸಲಿದೆ ಎನ್ನಲಾಗಿದೆ.

12.64 ಕಿ,ಮೀ. ದೂರ ಸಾಗುವ ಈ ರೈಲನ್ನು ಡಿಸೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ದಿಲ್ಲಿ ಮೆಟ್ರೋ ಇತಿಹಾಸದಲ್ಲಿ ಮೊದಲ ಚಾಲಕರಹಿತ ಮೆಟ್ರೋ ರೈಲು ಇದಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News