×
Ad

ಟಿಕೆಟ್ ಪಡೆಯದೆ ಪ್ರಯಾಣ: 10,81,090ರೂ. ದಂಡ ವಸೂಲಿ

Update: 2017-12-20 18:38 IST

ಬೆಂಗಳೂರು, ಡಿ.20: ಬಿಎಂಟಿಸಿ ವಾಹನಗಳಲ್ಲಿ ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣಿಸಿರುವ 22361 ಮಂದಿಯಿಂದ ಸುಮಾರು 10,81,090ರೂ.ದಂಡ ವಸೂಲಿ ಮಾಡಲಾಗಿದೆ.

ನಗರದಾದ್ಯಂತ ಸಂಚರಿಸುವ ವಾಹನಗಳನ್ನು ಬಿಎಂಟಿಸಿ ತನಿಖಾ ತಂಡಗಳು ನವೆಂಬರ್-2017 ರಲ್ಲಿ ಒಟ್ಟು 22,361 ಟ್ರಿಪ್‌ಗಳ ತಪಾಸಣೆಯಲ್ಲಿ 6,947 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ದಂಡ ವಸೂಲಿ ಮಾಡಿ, 2969 ಪ್ರಕರಣಗಳನ್ನು ದಾಖಲಿಸಿದೆ.

 ಮಹಿಳಾ ಪ್ರಯಾಣಿಕರಿಗೆಂದು ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 710 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 71ಸಾವಿರ ರೂ. ದಂಡ ವಶಪಡಿಸಲಾಗಿದೆ. ದಿನದ ಪಾಸು, ಮಾಸಿಕ ಪಾಸುಗಳನ್ನು ಹೊಂದುವ ಮೂಲಕ ಬಿಎಂಟಿಸಿ ಬಸ್‌ಗಳಲ್ಲಿ ಅನಧಿಕೃತವಾಗಿ ಪ್ರಯಾಣಿಸುವುದನ್ನು ನಿಲ್ಲಿಸಬೇಕು ಎಂದು ಬಿಎಂಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News