ಡಾ.ಆರತಿ ಕೃಷ್ಣಗೆ ದುಬೈನಲ್ಲಿ ‘ಕಾಯಕ ರತ್ನ’ ಪ್ರಶಸ್ತಿ ಪ್ರದಾನ

Update: 2017-12-20 13:40 GMT

ಬೆಂಗಳೂರು, ಡಿ.20: ದುಬೈನಲ್ಲಿ ಅಬುಧಾಭಿ ಕನ್ನಡ ಸಂಘ, ಶಾರ್ಜಾ ಕರ್ನಾಟಕ ಸಂಘ ಹಾಗೂ ಬ್ಯಾರಿ ಕಲ್ಚರಲ್ ಫೋರಮ್ ವತಿಯಿಂದ ಡಿ.19ರಂದು ಆಯೋಜಿಸಲಾಗಿದ್ದ 62ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣಗೆ ‘ಕಾಯಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆರತಿ ಕೃಷ್ಣ, ರಾಜ್ಯ ಸರಕಾರವು ಅನಿವಾಸಿ ಕನ್ನಡಿಗರ ಹಿತಾಸಕ್ತಿ ಕಾಪಾಡುವಲ್ಲಿ ವಿಶೇಷ ಗಮನವನ್ನು ನೀಡುತ್ತಿದ್ದು, ಹೊಸ ಹೊಸ ಕಲ್ಯಾಣ ಕಾರ್ಯಕ್ರಮಗಳನ್ನೊಳಗೊಂಡ ನೂತನ ನೀತಿಯನ್ನ ಲೋಕಾರ್ಪಣೆ ಮಾಡಿದೆ ಎಂದರು.

ಅನಿವಾಸಿ ಭಾರತೀಯ ನೀತಿಯಲ್ಲಿನ ಕಾರ್ಯಕ್ರಮಗಳನ್ನ ಜಾರಿಗೆ ತರುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಕನ್ನಡಿಗರಿಗೆ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ವೀರೇಂದ್ರಬಾಬು, ಸರ್ವೋತ್ತಮ ಶೆಟ್ಟಿ, ಸುಗಂಧ ರಾಜ್ ಬೇಕಲ್, ಡಾ.ಬಿ.ಕೆ.ಯೂಸುಫ್ ಹಾಗೂ ಇತರೆ ಕನ್ನಡ ಸಂಘದ ಸದಸ್ಯರಾದ ಚಂದ್ರಕಾಂತ್ ಜಿ.ಆರ್ ಮತ್ತು ರಫೀಕ್ ಕೊಡಗು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News