×
Ad

ಡಿ.21ರಂದು ಕರ್ನಾಟಕ ಭವನ ಉದ್ಘಾಟನೆ

Update: 2017-12-20 20:12 IST

 ಬೆಂಗಳುರು, ಡಿ.20: ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ಮುಂಬಯಿನಲ್ಲಿ ನಿರ್ಮಿಸಿರುವ ಕರ್ನಾಟಕ ಭವನವನ್ನು ಕೈಗಾರಿಕೆ ಸಚಿವ ಆರ್.ವಿ ದೇಶಪಾಂಡೆ ಇಂದು(ಡಿ.21) ಉದ್ಘಾಟಿಸಲಿದ್ದಾರೆ.

  ಮಹಾರಾಷ್ಟ್ರ ಸರಕಾರದ ಕೈಗಾರಿಕೆ, ಗಣಿ ಸಚಿವ ಸುಭಾಶ್ ದೇಸಾಯಿ, ಎಂಎಸ್‌ಐಎಲ್ ಅಧ್ಯಕ್ಷ ಹಂಪನಗೌಡ ಬಾದರ್ಲಿ, ವಾಣಿಜ್ಯ ಕೈಗಾರಿಕೆ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಸಾರ್ವಜನಿಕ ಉದ್ಯಮ ಇಲಾಖೆ ಕಾರ್ಯದರ್ಶಿ ರೇಣುಕಾ ಚಿದಂಬರಂ, ಕೈಗಾರಿಕಾ ಅಭಿವೃದ್ಧಿ ಆಯುಕ್ತ ದರ್ಪಣ್ ಜೈನ್, ಹಣಕಾಸು ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎನ್ ಜಯರಾಮ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News