ಟೆಸ್ಟ್‌ನ್ನು 10 ಓವರ್‌ಕ್ರಿಕೆಟ್ ಆಗಿಸಲು ವಕಾರ್ ಸಲಹೆ

Update: 2017-12-20 18:49 GMT

ಕರಾಚಿ, ಡಿ.20: ಟೆಸ್ಟ್ ಕ್ರಿಕೆಟ್ ಮತ್ತಷ್ಟು ಆಸಕ್ತಿದಾಯಕವಾಗಿಸಲು ಎರಡು ಇನಿಂಗ್ಸ್‌ನಲ್ಲಿ ತಲಾ 10 ಓವರ್‌ಗಳ ಪಂದ್ಯ ಆಡಬೇಕೆಂದು ಪಾಕಿಸ್ತಾನದ ವೇಗದ ಬೌಲಿಂಗ್ ದಂತಕತೆ ಹಾಗೂ ಮಾಜಿ ಕೋಚ್ ವಕಾರ್ ಯೂನಿಸ್ ಸಲಹೆ ನೀಡಿದ್ದಾರೆ.

ಆದರೆ, ವಕಾರ್ ಸಲಹೆಗೆ ಕ್ರಿಕೆಟ್ ಅಭಿಮಾನಿಗಳು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೆಂಟಿ-20 ಕ್ರಿಕೆಟ್‌ನ ಬಳಿಕ ಇದೀಗ ಟಿ-10 ಕ್ರಿಕೆಟ್ ಹೆಚ್ಚು ಜನಪ್ರಿಯವಾಗುತ್ತಿದ್ದು, ಉಭಯ ತಂಡಗಳು ಪ್ರತಿ ಇನಿಂಗ್ಸ್‌ನಲ್ಲಿ ತಲಾ 10 ಓವರ್‌ಗಳ ಪಂದ್ಯ ಆಡಲಿವೆ.

ಟೆಸ್ಟ್ ಮಾದರಿ ಕ್ರಿಕೆಟ್‌ಗೆ ಬದಲಾವಣೆಯ ಅಗತ್ಯವಿದೆ. ಟೆಸ್ಟ್‌ನ್ನು 10 ಓವರ್ ಕ್ರಿಕೆಟ್ ಆಗಿ ಮಾರ್ಪಡಿಸಬೇಕು ಎಂದು ವಕಾರ್ ಸಲಹೆ ನೀಡಿದ್ದಾರೆ. ಟಿ-10 ಕ್ರಿಕೆಟ್ ಮಾದರಿ ಫುಟ್ಬಾಲ್‌ನಂತೆಯೇ 90 ನಿಮಿಷಗಳಲ್ಲಿ ಮುಗಿಯುತ್ತದೆ. ಐಸಿಸಿ ಟಿ-10 ಕ್ರಿಕೆಟ್‌ನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಲು ಯತ್ನಿಸಬೇಕೆಂದು ವೀರೇಂದ್ರ ಸೆಹ್ವಾಗ್ ಇತ್ತೀಚೆಗೆ ಸಲಹೆ ನೀಡಿದ್ದರು.

  ಟಿ-10 ಕ್ರಿಕೆಟ್ ಲೀಗ್ ಟೂರ್ನಮೆಂಟ್ ಪ್ರಸ್ತುತ ಶಾರ್ಜಾದಲ್ಲಿ ನಡೆಯುತ್ತಿದ್ದು ಟೂರ್ನಿಯಲ್ಲಿ ಆರು ತಂಡಗಳು ಭಾಗವಹಿಸುತ್ತಿವೆ. ವೀರೇಂದ್ರ ಸೆಹ್ವಾಗ್, ಇಯಾನ್ ಮೊರ್ಗನ್, ಮುಹಮ್ಮದ್ ಆಮಿರ್, ಅಲೆಕ್ಸ್ ಹೇಲ್ಸ್, ಕಿರೊನ್ ಪೊಲಾರ್ಡ್, ಡೇವಿಡ್ ಮಿಲ್ಲರ್, ಹಸನ್ ಅಲಿ, ಡ್ವೇಯ್ನ್ ಬ್ರಾವೊ ಹಾಗೂ ಡರೆನ್ ಸಮ್ಮಿ ಸಹಿತ ಇತರ ಆಟಗಾರರು ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News