×
Ad

ಅಂಧ ನಾಗಶೆಟ್ಟಿಗೆ ಪಿಎಚ್‌ಡಿ ಪದವಿ ಪ್ರದಾನ

Update: 2017-12-22 20:31 IST

ಬೆಂಗಳೂರು, ಡಿ. 22: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಸಾಲೇಬೇರನ ಹಳ್ಳಿ ಗ್ರಾಮದ ಅಂಧ ವ್ಯಕ್ತಿ ನಾಗಶೆಟ್ಟಿ ಅವರು ಕುವೆಂಪು ಕಾವ್ಯಗಳಲ್ಲಿ ಅಂತರ್ ದೃಷ್ಟಿ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ.

ಜೆ.ಸಿ.ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಸುತ್ತಿರುವ ನಾಗಶೆಟ್ಟಿಗೆ ಬೆಂಗಳೂರು ವಿವಿಯ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೊಧನಾ ಕೇಂದ್ರದ ಸಲಹೆಗಾರರಾಗಿರುವ ಪ್ರೊ.ಸಿದ್ದಲಿಂಗಯ್ಯ ಮಾರ್ಗದರ್ಶಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News