×
Ad

ರಾಜ್ಯದ ಜನತೆಗೆ ಮುಖ್ಯಮಂತ್ರಿಯಿಂದ ಕ್ರಿಸ್‌ಮಸ್ ಶುಭಾಶಯ

Update: 2017-12-23 21:54 IST

ಬೆಂಗಳೂರು, ಡಿ. 23: ಶಾಂತಿದೂತ ಏಸುಕ್ರಿಸ್ತನ ಜನ್ಮದಿನಾಚರಣೆಯಾದ ಕ್ರಿಸ್‌ಮಸ್ ಹಬ್ಬದ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.

ಧರ್ಮ-ಸಹಿಷ್ಣುತೆ, ಕೋಮು-ಸೌಹಾರ್ಧ ಹಾಗೂ ತಾಳ್ಮೆಯಿಂದ ನಲ್ಮೆ ಎಂಬ ಆದರ್ಶ ಮತ್ತು ಸಿದ್ಧಾಂತಗಳು ಏಸುಕ್ರಿಸ್ತನ ಅರ್ಥಗರ್ಭಿತ ಸಂದೇಶಗಳಲ್ಲಿ ಅಡಕವಾಗಿವೆ. ಪ್ರೀತಿ ಮತ್ತು ವಿಶ್ವಾಸದ ನೆಲೆಗಟ್ಟಿನಲ್ಲಿ, ಸೋದರತೆ ಮತ್ತು ಸೌಹಾರ್ದತೆಯ ತಳಹದಿಯಲ್ಲಿ, ಅನುಕಂಪದ ಆಧಾರದಲ್ಲಿ ಹಾಗೂ ಕ್ಷಮಾಗುಣದ ಬುನಾದಿಯಲ್ಲಿ ಒಂದು ಹೊಸ ಸಮಾಜವನ್ನು ಸ್ಥಾಪಿಸಿದ ಏಸುಕ್ರಿಸ್ತನ ಸತ್ವ-ಭರಿತ ತತ್ವದ ಸದಾಶಯಗಳು ಎಲ್ಲಾ ವಯೋಮಾನದವರಿಗೂ ಹಾಗೂ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತವೆ.

ಎಲ್ಲಾ ಧರ್ಮಗಳನ್ನೂ ಹಾಗೂ ಎಲ್ಲಾ ಧರ್ಮದ ಜನರನ್ನೂ ಗೌರವಿಸುವ ಮಹಾಗುಣ ನಮ್ಮಲ್ಲಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಹಾಗೂ ಅಗಾಧ ಕೊಡುಗೆ ನೀಡಿ, ರಾಜ್ಯದ ಅಭಿವೃದ್ಧಿಯಲ್ಲಿ ಪಾಲುದಾರರಾಗಿರುವ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್ ಹಬ್ಬದ ಈ ಶುಭ ಸಂದರ್ಭದಲ್ಲಿ ಒಳಿತಾಗಲಿ ಎಂದು ಮನಸಾರೆ ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಅವರು  ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News