ವಿಮಾನ ಹಾರುವಾಗ ಮತ್ತು ಇಳಿಯುವಾಗ ಕಿಟಕಿ ಪರದೆ ತೆರೆದಿಡಲು ಹೇಳುವುದು ಯಾಕೆ ?

Update: 2017-12-24 05:19 GMT

ಹೊಸದಿಲ್ಲಿ, ಡಿ.24: ವಿಮಾನಯಾನದಲ್ಲಿ ಪ್ರಯಾಣಿಕರು ಹಲವು ನೀತಿನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ಇವುಗಳ ಉದ್ದೇಶ ತಕ್ಷಣಕ್ಕೆ ಅರ್ಥವಾಗುವುದಿಲ್ಲ. ವಿಮಾನ ಟೇಕಾಫ್ ಆಗುವಾಗ ಮತ್ತು ಇಳಿಯುವಾಗ ಏಕೆ ಸೀಟ್‌ಬೆಲ್ಟ್ ಕಟ್ಟಿಕೊಂಡು ನೇರವಾಗಿರಬೇಕು? ಸೆಲ್‌ಫೋನ್ ಕಾರ್ಯನಿರತವಾಗಿದ್ದರೆ ನಿಜವಾಗಿಯೂ ವಿಮಾನದ ಸಿಗ್ನಲ್‌ಗೆ ಧಕ್ಕೆಯಾಗುತ್ತದೆಯೇ? ವಿಮಾನದ ಕಿಟಕಿಗಳ ಪರದೆಯನ್ನು ಏಕೆ ಲ್ಯಾಂಡಿಂಗ್ ವೇಳೆ ಸರಿಸಲಾಗುತ್ತದೆ?

ಕಿಟಕಿ ಪರದೆಯ ಪ್ರಶ್ನೆಗೆ ಕೊನೆಯೂ ಉತ್ತರ ಸಿಕ್ಕಿದೆ. ಸಿಎನ್ ಟ್ರಾವಲರ್ ಪ್ರಕಾರ, "ವಿಮಾನಯಾನಿಗಳು ಕಿಟಕಿಯ ಪರದೆ ತೆಗೆದು ಮುಚ್ಚಬೇಕಾದ್ದು ಮನೋರಂಜನೆಗಾಗಿ ಅಲ್ಲ; ಅಥವಾ ಹೊರಗಡೆಯ ದೃಶ್ಯಾವಳಿ ನೋಡುವ ಸಲುವಾಗಿಯೂ ಅಲ್ಲ. ಸೂರ್ಯನ ಪ್ರಖರ ಕಿರಣಗಳಿಂದ ಸುರಕ್ಷೆಗಾಗಿಯೂ ಅಲ್ಲ. ಮೂಲಭೂತವಾಗಿ ಸುರಕ್ಷತೆ ದೃಷ್ಟಿಯಿಂದ"

ಅಮೆರಿಕದ ನಿಯಮಾವಳಿಗಳ ಪ್ರಕಾರ ವಿಮಾನದ ಸಹಾಯಕ, ತುರ್ತು ಸಂದರ್ಭಗಳಲ್ಲಿ 90 ಸೆಕೆಂಡ್‌ಗಳ ಒಳಗಾಗಿ ವಿಮಾನ ಖಾಲಿ ಮಾಡಿಸಬೇಕಾಗುತ್ತದೆ. ಟೇಕಾಫ್ ಅವಧಿಯಲ್ಲಿ ಮತ್ತು ಲ್ಯಾಂಡಿಂಗ್ ಅವಧಿಯಲ್ಲಿ ಬಹುತೇಕ ವಿಮಾನ ಅಪಘಾತಗಳು ಸಂಭವಿಸುತ್ತವೆ. ಕಿಟಕಿ ಪರದೆ ತೆಗೆದಿದ್ದರೆ, ವಿಮಾನ ಸಿಬ್ಬಂದಿಗೆ ತುರ್ತು ಸಂದರ್ಭವನ್ನು ಗ್ರಹಿಸಲು ಮತ್ತು ಯಾವ ನಿರ್ಗಮನ ಮೂಲಕ ಹೊರಕ್ಕೆ ಕಳುಹಿಸಬಹುದು ಎಂದು ಅಂದಾಜಿಸಲು ನೆರವಾಗುತ್ತದೆ.
ಸಹಜವಾದ ಬೆಳಕು ಕೂಡಾ ತುರ್ತು ನಿರ್ಗಮನ ಸುಲಲಿತವಾಗಿ ನಡೆಯಲು ಅನುಕೂಲ ಕಲ್ಪಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News