×
Ad

ಕೆಎಎಸ್ ಅಧಿಕಾರಿಗಳ ವರ್ಗಾವಣೆ

Update: 2017-12-27 21:24 IST

ಬೆಂಗಳೂರು, ಡಿ.27: ರಾಜ್ಯ ಸರಕಾರವು 11 ಮಂದಿ ಕೆಎಎಸ್ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಪ್ರದೀಪ್ ಕುರುಡೇಕರ್- ಉಡುಪಿ ಜಿಲ್ಲೆ ಉಡುಪಿ ತಾಲೂಕಿನ ತಹಶೀಲ್ದಾರ್ ಗ್ರೇಡ್-1, ಬಿ.ಎಂ.ಕುಂಜಮ್ಮ-ದಕ್ಷಿಣ ಜಿಲ್ಲೆಯ ಸುಳ್ಯ ತಾಲೂಕಿನ ತಹಶೀಲ್ದಾರ್ ಗ್ರೇಡ್-1, ಬಸಲಿಂಗಪ್ಪ ನಾಯ್ಕೋಡಿ-ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ತಹಶೀಲ್ದಾರ್ ಗ್ರೇಡ್-1.

ಯಲ್ಲಪ್ಪ ಸುಬೇದಾರ್- ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ್, ವಿರೇಶ್ ಬಿರಾದಾರ್- ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿಯ ಮುನ್ಸಿಪಲ್ ತಹಶೀಲ್ದಾರ್, ಬಿ.ಕೆ.ನಾಗರತ್ನ-ಬೆಂಗಳೂರು ಉತ್ತರ ವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ್ ಗ್ರೇಡ್-2.

ರಾಮಲಕ್ಷ್ಮಯ್ಯ-ಬೆಂಗಳೂರು ಉತ್ತರ ತಾಲೂಕು ಕಚೇರಿಯ ತಹಶೀಲ್ದಾರ್ ಗ್ರೇಡ್-2, ಮೇಜರ್ ಸಿದ್ದಲಿಂಗಯ್ಯ ಹಿರೇಮಠ-ಕಲಬುರಗಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರು, ಬಿ.ವಾಣಿ-ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಜಂಟಿ ನಿರ್ದೇಶಕ(ಆಡಳಿತ).

ಕವಿತಾ ರಾಜಾರಾಂ-ಬೆಂಗಳೂರಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರ ಕೇಂದ್ರ ಸ್ಥಾನಿಕ ಸಹಾಯಕರು, ಕೆ.ಟಿ.ಶಾಂತಲಾ-ವಸತಿ ಇಲಾಖೆಯ ರೇರಾ ಅಧೀನ ಕಾರ್ಯದರ್ಶಿ, ಎಸ್.ಎನ್.ರುದ್ರೇಶ್-ಗದಗ ಜಿಲ್ಲೆಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಜಿಲ್ಲಾಧಿಕಾರಿಗಳ ಕಚೇರಿಯ ಯೋಜನಾ ನಿರ್ದೇಶಕರು.

ರಮೇಶ್ ದೇಸಾಯಿ-ಹುಬ್ಬಳ್ಳಿಯ ರಾಜ್ಯ ನಗರ ಮೂಲಭೂತ ಸೌಕರ್ಯ ಹಣಕಾಸು ನಿಗಮದ ಉಪ ಯೋಜನಾ ನಿರ್ದೇಶಕರು, ಡಾ.ಬಿ.ಶರಣಪ್ಪ-ಕಲಬುರಗಿ ಜಿಲ್ಲೆಯ ಕೆಐಎಡಿಬಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಯ ಪ್ರಭಾರದಲ್ಲಿರಿಸಲಾಗಿದೆ.

ಬಿ.ವೆಂಕಟೇಶ್-ಬೆಂಗಳೂರಿನ ಕೆಐಎಡಿಬಿಯ ವಿಶೇಷ ಭೂ ಸ್ವಾಧೀನಾಧಿಕಾರಿ-1, ಎಚ್.ಜಿ.ಚಂದ್ರಶೇಖರಯ್ಯ-ಬೆಂಗಳೂರಿನ ರಾಜ್ಯ ಗೃಹ ಮಂಡಳಿಯ ಉಪ ಪ್ರಧಾನ ವ್ಯವಸ್ಥಾಪಕ, ಎ.ಬಿ.ವಿಜಯಕುಮಾರ್-ಚಿತ್ರುದುರ್ಗ ಜಿಲ್ಲೆಯ ಉಪ ವಿಭಾಗಾಧಿಕಾರಿ, ಕೆ.ಎಂ.ನಂದಿನಿ-ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಜಾಗೃತಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News