ಜ.7ರಂದು ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆ
Update: 2017-12-27 23:11 IST
ಬೆಂಗಳೂರು, ಡಿ.27: ಅಖಿಲ ಭಾರತ ಸೈನಿಕ ಶಾಲೆಯ 6 ಮತ್ತು 9ನೆ ತರಗತಿಯ ಪ್ರವೇಶ ಪರೀಕ್ಷೆಯು ಜನವರಿ 7ರಂದು ಕೊಡಗು ಮತ್ತು ಬೆಂಗಳೂರಿನ ಹೆಬ್ಬಾಳದ ಏರ್‌ಫೋರ್ಸ್ ಶಾಲೆಯ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ. ಪರೀಕ್ಷೆ ಸಂಬಂಧ ಪ್ರವೇಶ ಪತ್ರ ದೊರೆಯದ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ: 08276-278963 ಮೂಲಕ ಸಂಪರ್ಕಿಸಬಹುದಾಗಿದೆ.