×
Ad

ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು

Update: 2017-12-28 19:25 IST

ಬೆಂಗಳೂರು, ಡಿ.28: ನಿರ್ಮಾಣ ಹಂತದ ಕಟ್ಟಡದಿಂದ ಆಯತಪ್ಪಿ ಬಿದ್ದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಟವರ್‌ಶರ್ಮಾ(37) ಮೃತಪಟ್ಟ ಕಾರ್ಮಿಕ ಎಂದು ಪೊಲೀಸರು ತಿಳಿಸಿದ್ದಾರೆ. ನಾಗರಬಾವಿಯ 9ನೆ ಬ್ಲಾಕ್ 7ನೆ ಮುಖ್ಯರಸ್ತೆಯಲ್ಲಿ ಮುರಗೇಶ್ ಎಂಬುವರು ಮನೆ ಕಟ್ಟಿಸುತ್ತಿದ್ದು, ಇಂಟೀರಿಯರ್ ಡೆಕೋರೇಟರ್ ಕೆಲಸ ನಡೆಯುತ್ತಿತ್ತು. ನಟವರ್ ಶರ್ಮ ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದು, ಬುಧವಾರ ಸಂಜೆ 6:45 ಸುಮಾರಿಗೆ ಮೊದಲನೆ ಮಹಡಿಯಲ್ಲಿ ಕೆಲಸ ನಿರ್ವಸುತ್ತಿದ್ದಾಗ ಆಯತಪ್ಪಿ ಕೆಳಕ್ಕೆ ಬಿದ್ದ ಪರಿಣಾಮ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News