ವಿಜಯ್ ಶಂಕರ್ ತ.ನಾಡು ತಂಡಕ್ಕೆ ನಾಯಕ

Update: 2017-12-28 18:40 GMT

ಹೊಸದಿಲ್ಲಿ, ಡಿ.28: ವಿಶಾಖಪಟ್ಟಣ ಹಾಗೂ ವಿಜಯನಗರದಲ್ಲಿ ಜನವರಿ 8ರಿಂದ 14ರ ತನಕ ನಡೆಯಲಿರುವ ಸೈಯದ್ ಮುಷ್ತಾಕ್‌ಅಲಿ ಟ್ವೆಂಟಿ-20 ಟೂರ್ನಿಗೆ 26ರ ಹರೆಯದ ಆಲ್‌ರೌಂಡರ್ ವಿಜಯ್‌ಶಂಕರ್ ತಮಿಳುನಾಡಿನ 15 ಮಂದಿ ಸದಸ್ಯರ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದ ನಿರ್ಣಾಯಕ ಟೆಸ್ಟ್ ಸರಣಿಯ 2ನೇ ಹಾಗೂ 3ನೇ ಪಂದ್ಯಗಳಲ್ಲಿ ವಿಜಯ್‌ಶಂಕರ್ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ತಮಿಳುನಾಡು ಕಳೆದ ವರ್ಷ ಶಂಕರ್ ನಾಯಕತ್ವದಲ್ಲಿ ವಿಜಯ್ ಹಝಾರೆ ಟ್ರೋಫಿ ಹಾಗೂ ದೇವಧರ್ ಟ್ರೋಫಿಯನ್ನು ತನ್ನ ಬಗಲಿಗೆ ಹಾಕಿಕೊಂಡಿತ್ತು.

ಉಪನಾಯಕನಾಗಿ ಬಾಬಾ ಅಪರಾಜಿತ್ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಹಾಗೂ ಟ್ವೆಂಟಿ-20 ನಿರ್ಣಾಯಕ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ್ದ ದಿನೇಶ್ ಕಾರ್ತಿಕ್ ಮತ್ತು ವಾಷಿಂಗ್ಟನ್ ಸುಂದರ್ ಒಳಗೊಂಡಿದ್ದಾರೆ. ತಮಿಳುನಾಡು ಕ್ರಿಕೆಟ್ ತಂಡವು ಆಂಧ್ರಪ್ರದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನು ವಿಶಾಖಪಟ್ಟಣದಲ್ಲಿ ಆಡಲಿದೆ. 15 ಸದಸ್ಯರ ತಂಡದ ವಿವರ ಇಂತಿದೆ.

►ತಮಿಳುನಾಡು ತಂಡ

ವಿಜಯ್‌ಶಂಕರ್(ನಾಯಕ), ಬಿ. ಅಪರಾಜಿತ್(ಉಪನಾಯಕ), ಕೆ. ಭರತ್ ಶಂಕರ್, ವಾಷಿಂಗ್ಟನ್ ಸುಂದರ್, ಅಭಿನವ್ ಮುಕುಂದ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಎನ್. ಜಗದೀಶನ್(ವಿಕೆಟ್ ಕೀಪರ್), ರಹಿಲ್ ಎಸ್. ಶಾ, ಆರ್. ಸಾಯಿ ಕಿಶೋರ್, ಎಂ. ಮುಹಮ್ಮದ್, ಕೆ. ವ್ನಿೇಶ್, ಸಂಜಯ್ ಯಾದವ್, ಎಸ್. ಅನಿರುದ್ಧ್, ಡಬ್ಲೂ ಆ್ಯಂಟೊನಿ ದಾಸ್, ರೋಹಿತ್ ರಾಮಲಿಂಗಮ್ ಹಾಗೂ ಎಂ. ಅಶ್ವಿನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News