×
Ad

ಮೊದಲು ಜನಿಸುವ ಹೆಣ್ಣು ಮಗುವಿಗೆ ಉಚಿತ ಶಿಕ್ಷಣ: ಮೇಯರ್ ಸಂಪತ್‌ರಾಜ್

Update: 2017-12-29 20:14 IST
ಸಂಪತ್‌ರಾಜ್

ಬೆಂಗಳೂರು, ಡಿ.29: ನೂತನ ವರ್ಷ 2018ರಂದು ಮೊದಲು ಜನಿಸುವ ಹೆಣ್ಣು ಮಗುವಿಗೆ ಬಿಬಿಎಂಪಿ ವತಿಯಿಂದಲೇ ಉಚಿತ ಶಿಕ್ಷಣ ನೀಡಲಾಗುವುದು ಎಂದು ಮೇಯರ್ ಸಂಪತ್‌ರಾಜ್ ತಿಳಿಸಿದ್ದಾರೆ.

ನಗರದ ಯಾವುದೇ ಆಸ್ಪತ್ರೆಯಲ್ಲಿ ಯಾವುದೇ ಸಿಜೇರಿಯನ್ ಇಲ್ಲದೇ ಜನಿಸುವ ಮಗುವಿಗೆ ಪದವಿವರೆಗೆ ಉಚಿತ ಶಿಕ್ಷಣ ಸೌಲಭ್ಯ ದೊರೆಯಲಿದೆ. ಮಗುವಿನ ಬ್ಯಾಂಕ್ ಖಾತೆಗೆ ಐದು ಲಕ್ಷ ರೂ. ಹಣ ಹಾಕಲಾಗುವುದು. ಇದಕ್ಕಾಗಿ ಆರೋಗ್ಯ ಅಧಿಕಾರಿಗಳ ನೇಮಕ ಮಾಡಲಾಗಿದ್ದು, ಡಿ.31ರಂದು ಮಧ್ಯರಾತ್ರಿ ಜನಿಸುವ ಹೆಣ್ಣು ಮಗುವಿನ ಮಾಹಿತಿ ದಾಖಲಿಸಿ ತದನಂತರ ವಿಜೇತ ಮಗುವಿನ ಪೋಷಕರಿಗೆ ಮಾಹಿತಿ ನೀಡಲಾಗುವುದು ಎಂದು ಮೇಯರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News