ಬೆಂಗಳೂರು-ಪಾಂಡಿಚೇರಿ ನೂತನ ಬಸ್ ಮಾರ್ಗ ಆರಂಭ
Update: 2017-12-29 23:04 IST
ಬೆಂಗಳೂರು, ಡಿ.29: ಕೆಎಸ್ಸಾರ್ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜ.4ರಿಂದ ಬೆಂಗಳೂರು-ಪಾಂಡಿಚೇರಿ ಮಾರ್ಗದಲ್ಲಿ ನೂತನ ರಾಜಹಂಸ ಬಸ್ ಮಾರ್ಗವನ್ನು ಕಲ್ಪಿಸಲಾಗುತ್ತಿದೆ.
ವೇಳಾ ಪಟ್ಟಿ: ಜ.4ರಂದು ರಾತ್ರಿ 10ಕ್ಕೆ ಬೆಂಗಳೂರಿನಿಂದ ಹೊರಡಲಿದ್ದು, ಬೆಳಗ್ಗೆ 4.45ಕ್ಕೆ ಪಾಂಡಿಚೇರಿ ತಲುಪಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.