×
Ad

ಬೆಂಗಳೂರು :ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

Update: 2017-12-29 23:17 IST

ಬೆಂಗಳೂರು, ಡಿ.29: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ದಕ್ಷಿಣ ಭಾಗದ ವತಿಯಿಂದ 2017-18ನೆ ಸಾಲಿನ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಕ್ರಿಶ್ಚಿಯನ್ ಸಮುದಾಯದಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗಮದ ಹೊಸ ಯೋಜನೆಯಂತೆ ಟ್ಯಾಕ್ಸ್-ಗೂಡ್ಸ್ ವಾಹನ ಖರೀದಿಯ ಸಹಾಯಧನ ಯೋಜನೆಗಾಗಿ ಪ್ರತಿ ಅರ್ಜಿದಾರರಿಗೆ 3 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಅರ್ಜಿದಾರರು ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ್ದು, ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ www.kmdc.kar.nic.in , www.kmdc.karnataka.gov.in, ದೂ.080-22114815,22114817 ಹಾಗೂ ಹಮೀದ್ ಷಾ ಕಾಂಪ್ಲೆಕ್ಸ್, ಎರಡನೆ ಮಹಡಿ, ಎಸ್.ಎಫ್.2, ಹಲಸೂರು ಗೇಟ್ ಪೋಲಿಸ್ ಠಾಣೆ ಹಿಂಭಾಗ, ಕಬ್ಬನ್‌ಪೇಟೆ ಮುಖ್ಯರಸ್ತೆ, ಬೆಂ.2 ಇಲ್ಲಿಗೆ ಜ.10 ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ವಿಭಾಗದ ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆುಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News