ಅಜ್ಮಾನ್: ಜ.1ರಂದು ಡಿ.ಕೆ.ಎಸ್.ಸಿ ಯುಎಇ "ಗ್ರ್ಯಾಂಡ್ ಕರಾವಳಿ ಫ್ಯಾಮಿಲಿ ಮುಲಾಖತ್"

Update: 2017-12-30 05:24 GMT

ದುಬೈ, ಡಿ.30: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ಡಿ.ಕೆ.ಎಸ್.ಸಿ.) ಯು.ಎ.ಇ ಇದರ ವತಿಯಿಂದ ಅಜ್ಮಾನ್ ನ ವುಡ್ ಲೀಂ ಪಾರ್ಕ್ ಸ್ಕೂಲ್ ನಲ್ಲಿ ಜ.1ರಂದು "ಗ್ರ್ಯಾಂಡ್ ಕರಾವಳಿ ಫ್ಯಾಮಿಲಿ ಮುಲಾಖತ್" ಹಮ್ಮಿಕೊಳ್ಳಲಾಗಿದೆ. 

ಕಾರ್ಯಕ್ರಮವು ಅಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಜರಗಲಿದೆ. ಡಿ.ಕೆ.ಎಸ್.ಸಿ. ಯುಎಇ ರಾಷ್ಟೀಯ ಸಮಿತಿ ಗೌರವಾಧ್ಯಕ್ಷ ಸಯ್ಯದ್ ತ್ವಾಹ ಬಾಫಕಿ  ತಂಙಳ್ ಅವರ ದುಆದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಾಷ್ಟೀಯ ಸಮಿತಿಯ ಅಧ್ಯಕ್ಷ ಹಾಜಿ ಇಕ್ಬಾ ಲ್ಗಾ ಕನ್ನಂಗಾರ್ ಅಧ್ಯಕ್ಷತೆ ವಹಿಸುವರು. 

ಮುಖ್ಯ ಅತಿಥಿಗಳಾಗಿ ಕರ್ನಾಟಕ ಆರೋಗ್ಯ ಸಚಿವ ಯು.ಟಿ.ಖಾದರ್, ಮುಖ್ಯ ಸಚೇತಕ ಅಶೋಕ್ ಎಂ. ಪಟ್ಟಾನ್, ಶಾಸಕ ಮೊಯ್ದಿನ್ ಬಾವ, ಬಿ.ಎ. ಗ್ರೂಪ್ ಆಫ್ ಕಂಪೆನಿಯ ಸ್ಥಾಪಕ ಬಿ.ಎ.ಅಹಮದ್ ಹಾಜಿ ತುಂಬೆ, ಕರ್ನಾಟಕ ರಾಜ್ಯ ಜನತಾ ದಳ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ನಝೀರ್ ಹುಸೈನ್ ಪಡುಬಿದ್ರೆ, ಡಿ.ಕೆ.ಎಸ್.ಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಹಾಜಿ ಕಿನ್ಯ, ಡಿ.ಕೆ.ಎಸ್.ಸಿ 20ನೇ ವಾರ್ಷಿಕ ಸಮ್ಮೇಳನ ಸಮಿತಿಯ ಅಧ್ಯಕ್ಷರಾಗಿದ್ದ ಬಿ.ಎಂ.ಮುಮ್ತಾಝ್ ಅಲಿ, ಕೋಶಾಧಿಕಾರಿ ಜಿ.ಎಚ್.ಬಿ.ಮುಹಮ್ಮದ್ ಕನ್ನಂಗಾರ್, ಯುಎಇಯ ಪ್ರಮಖ ಉದ್ಯಮಿ ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್, ವುಡ್ ಲೀಂ ಪಾರ್ಕ್ ಸ್ಕೂಲ್ ಅಜ್ಮಾನ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ನೌಫಲ್ ಅಹಮದ್, ಮೊಯ್ದಿನ್ ವರ್ಕ್ಸ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ರಫ್ ತುಂಬೆ ಮೊದಲಾದವರು ಭಾಗವಹಿಸುವರು.

ಇದೇ ಸಂದರ್ಭ ತುಂಬೆ ಆಸ್ಪತ್ರೆಯ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ ಎಂದು ಡಿ.ಕೆ.ಎಸ್.ಸಿ. ಫ್ಯಾಮಿಲಿ ಮುಲಾಖತ್ ಅಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 050 724 0659/056 9349656 /050 8417475/ 055 1596353/050 7983573/ 056 2169881 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News