×
Ad

ಪದ್ದ ಶೇರಿಗಾರ

Update: 2017-12-30 20:05 IST

ಹೆಬ್ರಿ, ಡಿ.30: ಹೆಬ್ರಿ ಪರಿಸರದ ಹಿರಿಯ ನಾಗಸ್ವರ ವಾದಕರಾಗಿ ಖ್ಯಾತಿ ಪಡೆದಿದ್ದ ಪದ್ದ ಶೇರಿಗಾರ(95) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.

ಜನಮನ ಗೆದ್ದ ಎಲ್ಲರ ಪ್ರೀತಿಯ ಪದ್ದಣ್ಣ ಅವರಿಗೆ ಹಲವಾರು ಸನ್ಮಾನ ಗೌರವಗಳು ಸಂದಿವೆ. ತನ್ನ ಕೊನೆಯ ದಿನಗಳವರೆಗೂ ನಾಗಸ್ವರ ವಾದನದಲ್ಲಿ ನಿರತರಾಗಿದ್ದರು. ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ಪರಿಚಾರಕರಾಗಿ ಸೇವಾ ಕೈಂಕರ್ಯದಲ್ಲಿ ಸಕ್ರೀಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News