×
Ad

ಹೊಸ ವರ್ಷಾಚರಣೆಗೆ ಬಿಎಂಟಿಸಿ ಗಿಫ್ಟ್: ವಜ್ರ ಬಸ್‌ಗಳಲ್ಲಿ ಶೇ.37ರಷ್ಟು ದರ ಕಡಿತ

Update: 2017-12-30 22:55 IST

ಬೆಂಗಳೂರು, ಡಿ.30: ಹೊಸ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಬಿಎಂಟಿಸಿ ವತಿಯಿಂದ ನಗರದ ಜನತೆಗೆ ಕೊಡುಗೆಯೊಂದನ್ನು ನೀಡಿದ್ದು, ವಜ್ರ ಬಸ್‌ಗಳ ದರವನ್ನ ಶೇ.37ರಷ್ಟು ಕಡಿಮೆ ಮಾಡಿದೆ.

ನಗರದ ಜನತೆ ಬಿಎಂಟಿಸಿ ಬಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಿ ಎಂಬ ಸದುದ್ದೇಶದಿಂದ ಜನವರಿ ತಿಂಗಳವರೆಗೆ ಮಾತ್ರ ವಜ್ರ ಬಸ್‌ದರವನ್ನು ಕಡಿತಗೊಳಿಸಲಾಗಿದೆ. ಆದರೆ, ಜನವರಿಯಲ್ಲಿ ಹೆಚ್ಚಿನ ಪ್ರಯಾಣಿಕರು ವಾಯುವಜ್ರ ಬಸ್‌ಗಳಲ್ಲಿಯೇ ಸಂಚರಿಸಿದರೆ ಈ ದರವನ್ನು ಮುಂದಿನ ತಿಂಗಳಿಗೂ ಮಂದುವರೆಸಲಿದೆ.

ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪ್ರಯಾಣಿಕರು ಗುಂಪಿನಲ್ಲಿ ಪ್ರಯಾಣಿಸಿದ್ದಲ್ಲಿ, ಶೇ.15ರಷ್ಟು ಗುಂಪು ರಿಯಾಯಿತಿಯನ್ನು ನೀಡಲಾಗುತ್ತದೆ. ಪ್ರಥಮ ಹಂತವಾಗಿ ವಾಯುವಜ್ರ ಸೇವೆಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಈ ರಿಯಾಯಿತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ವಾಯುವಜ್ರ ಮಾರ್ಗಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಬಿಎಂಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News