×
Ad

ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಿದರೆ ಕೋರೆಗಾಂವ್ ವೀರರಿಗೆ ನಮನ ಸಲ್ಲಿಸಿದಂತೆ: ಪ್ರೊ.ಹರಿರಾಮ್

Update: 2017-12-30 23:02 IST

ಕಲಬುರಗಿ, ಡಿ.30: ಅಸಮಾನತೆ ಸೃಷ್ಟಿಸುತ್ತಿರುವ ರಾಜಕೀಯ ಪಕ್ಷಗಳನ್ನು 2018ರ ಚುನಾವಣೆಯಲ್ಲಿ ಸೋಲಿಸುವುದರ ಮೂಲಕ ಕೋರೆಗಾಂವ್ ವೀರರಿಗೆ ಶೋಷಿತ ಸಮುದಾಯ ನಮನ ಸಲ್ಲಿಸಬೇಕೆಂದು ಬಹುಜನ ಚಳವಳಿ ಮುಖಂಡ ಪ್ರೊ.ಹರಿರಾಮ್ ಕರೆ ನೀಡಿದ್ದಾರೆ. ಶನಿವಾರ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿಂದು ಹಮ್ಮಿಕೊಂಡಿದ್ದ ಕೋರೆಗಾಂವ್ ವಿಜಯೋತ್ಸವ 200 ವರ್ಷಗಳು-ಮುಂದೇನು ವಿಭಾಗ ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

200 ವರ್ಷಗಳ ಹಿಂದೆ ಪೇಶ್ವೆಗಳ ಹುಟ್ಟಡಗಿಸಿದ ಮಹರ್ ಸೈನಿಕರಿಗೆ ನಿಜವಾದ ನಮನ ಸಲ್ಲಿಸಲು ಶೋಷಿತ ಸಮುದಾಯ ಮತದಾನ ಎಂಬ ಅಸ್ತ್ರ ಬಳಸಿ ಮುಂಬರುವ ಚುನಾವಣೆಯಲ್ಲಿ ಅಂಬೇಡ್ಕರ್‌ವಾದಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಮಕ್ಕಳ ತಜ್ಞ ಡಾ.ರಾಹುಲ್ ತಮ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ತಹಶೀಲ್ದಾರ್ ಕೆ.ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ, ರಾಜ್ಯ ಕಾರ್ಯದರ್ಶಿ ಹಣಮಂತ ಬೋಧನಕರ್, ಜಿಲ್ಲಾಧ್ಯಕ್ಷ ಸೂರ್ಯಕಾಂತ ನಿಂಬಾಳಕರ್, ಶಿಕ್ಷಕ ಮನೋಜಕುಮಾರ ಭಾಗೇಕರ್, ಉಪನ್ಯಾಸಕ ಡಾ.ರವೀಂದ್ರನಾಥ್ ಹೊಸ್ಮನಿ, ಶ್ರೀನಿವಾಸ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News