ದ್ವೇಷಕಾರಿದ ಟ್ರೋಲ್ ಗಳು ಮತ್ತು ಗುರ್ಮೆಹರ್ ಕೌರ್

Update: 2018-01-01 09:39 GMT

ದಿಲ್ಲಿಯ ರಾಮ್ಜಸ್ ಕಾಲೇಜಿನಲ್ಲಿ ಎಐಎಸ್ಎಫ್ ಹಾಗು ಎಬಿವಿಪಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯ ನಂತರ ಹುತಾತ್ಮ ಯೋಧ ಮಂದೀಪ್ ಸಿಂಗ್ ರ ಪುತ್ರಿ ಗುರ್ಮೆಹರ್ ಕೌರ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದರು. ಎಬಿವಿಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗುರ್ಮೆಹರ್ ‘ಸೇವ್ ದಿಲ್ಲಿ ಯುನಿವರ್ಸಿಟಿ’ ಆಂದೋಲನವನ್ನು ಆರಂಭಿಸಿದರು. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ದ್ವೇಷಕಾರುವ ಟ್ವೀಟ್ ಗಳು, ಕೊಲೆ, ಅತ್ಯಾಚಾರದ ಬೆದರಿಕೆಗಳನ್ನು ಅವರು ಎದುರಿಸಬೇಕಾಯಿತು.

“ಪಾಕಿಸ್ತಾನ ನನ್ನ ತಂದೆಯನ್ನು ಕೊಲ್ಲಲಿಲ್ಲ, ಯುದ್ಧ ಅವರನ್ನು ಕೊಂದಿತು” ಎಂಬ ಗುರ್ಮೆಹರ್ ಹೇಳಿಕೆ ಮತ್ತೊಮ್ಮೆ ಸುದ್ದಿಯಾಯಿತು. ಅವರ ಹೇಳಿಕೆಯ ಹಿಂದೆ ಕೆಲ ರಾಜಕೀಯ ಶಕ್ತಿಗಳಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದರೆ, “ನಾನು ತ್ರಿಶತಕ ದಾಖಲಿಸಿಲ್ಲ, ನನ್ನ ಬ್ಯಾಟ್ ತ್ರಿಶತಕ ದಾಖಲಿಸಿದೆ” ಎಂದು ಕ್ರಿಕೆಟಿಗ ವಿರೇಂದರ್ ಸೆಹ್ವಾಗ್ ಗೇಲಿ ಮಾಡಿದ್ದರು. ಸೆಹ್ವಾಗ್ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News