ಇಂಗ್ಲೆಂಡ್ ಏಕದಿನ ತಂಡದಿಂದ ಹಿಂದೆ ಸರಿದ ಬೆನ್ ಸ್ಟೋಕ್ಸ್

Update: 2018-01-01 18:48 GMT

ಲಂಡನ್, ಜ.1: ಅಮಾನತುಗೊಂಡಿರುವ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಆಸ್ಟ್ರೇಲಿಯ ವಿರುದ್ಧ ಈ ತಿಂಗಳು ನಡೆಯಲಿರುವ ಐದು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯಿಂದ ಹಿಂದೆ ಸರಿದಿದ್ದಾರೆ. ಸ್ಟೋಕ್ಸ್‌ರಿಂದ ತೆರವಾದ ಸ್ಥಾನಕ್ಕೆ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಆಯ್ಕೆಯಾಗಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಸೋಮವಾರ ತಿಳಿಸಿದೆ.

ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ತಾತ್ಕಾಲಿಕವಾಗಿ ನೇಮಕಗೊಂಡಿದ್ದರು. ಸೆಪ್ಟಂಬರ್‌ನಲ್ಲಿ ಬ್ರಿಸ್ಟೊಲ್ ನೈಟ್‌ಕ್ಲಬ್‌ನ ಹೊರಗೆ ನಡೆದಿದ್ದ ಗಲಾಟೆಗೆ ಸಂಬಂಧಿಸಿ ಕ್ರೌನ್ ಪ್ರಾಸಿಕ್ಯೂಶನ್ ಬೋರ್ಡ್(ಸಿಪಿಎಸ್) ನೀಡುವ ತೀರ್ಪಿಗಾಗಿ ಅವರು ಕಾಯುತ್ತಿದ್ದಾರೆ. ‘‘ಸ್ಟೋಕ್ಸ್ ಅವರು ಮಂಗಳವಾರ ಆಸ್ಟ್ರೇಲಿಯಕ್ಕೆ ನಿರ್ಗಮಿಸಲಿರುವ ಇಂಗ್ಲೆಂಡ್ ಆಟಗಾರರೊಂದಿಗೆ ತೆರಳುವುದಿಲ್ಲ. ಅವರ ಲಭ್ಯತೆಯು ಸಿಪಿಎಸ್ ಸಲಹೆಯನ್ನು ಅವಲಂಬಿತವಾಗಿದೆ. ಐಪಿಎಲ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಅವರಿಗೆ ಯಾವುದೇ ಅಭ್ಯಂತರವಿಲ್ಲ’’ ಎಂದು ಇಸಿಬಿ ಹೇಳಿದೆ.

ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಜೂ.14 ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News