ಬೆಂಗಳೂರಿನಲ್ಲಿ ಮತ್ತೆ ‘ಕೋಳಿ ಜ್ವರ’
ಬೆಂಗಳೂರು, ಜ.2: ಬೆಂಗಳೂರಿನ ಕೋಳಿ ಮಾರಾಟ ಕೇಂದ್ರವೊಂದರಲ್ಲಿ ಕೋಳಿಗಳಿಗೆ ಜ್ವರ ಬಂದಿದ್ದು, ಇವುಗಳಲ್ಲಿ ‘ಎಚ್-5 ರೋಗಾಣು’ ಪತ್ತೆಯಾಗಿದೆ ಎಂದು ಎನ್‌ಐಎಚ್‌ಎಸ್‌ಎಡಿ ಪ್ರಯೋಗಾಲಯ ದೃಢಪಡಿಸಿದೆ. ಈ ಬಗ್ಗೆ ಸಾರ್ವಜನಿಕಲ್ಲಿ ಆತಂಕ ಸೃಷ್ಟಿಸಿದೆ.
ಬೆಂಗಳೂರಿನ ಯಲಹಂಕದ ದಾಸರಹಳ್ಳಿಯಲ್ಲಿ ಕೋಳಿ ಮಾರಾಟ ಕೇಂದ್ರವೊಂದರಲ್ಲಿ ಡಿ.25 ರಂದು ಕೋಳಿಗಳು ಸಾವನ್ನಪ್ಪಿದ್ದವು. ಈ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಭೂಪಾಲ್‌ನ ಎನ್‌ಐಎಚ್‌ಎಸ್‌ಎಡಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸಂಶೋಧನೆಯಿಂದ ‘ಎಚ್-5 ರೋಗಾಣು’ ಇರುವುದನ್ನು ದೃಢಪಟ್ಟಿದೆ.
ಬಳಿಕ ತಕ್ಷಣವೇ ಇಲಾಖಾ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷಾ ಕ್ರಮವಾಗಿ ಕೋಳಿ ಮಾರಾಟ ಕೇಂದ್ರ ಮತ್ತು ಸುತ್ತಮುತ್ತಲಿನ ಮಾರಾಟ ಕೇಂದ್ರಗಳ ಮಾರಾಟವನ್ನು ಸ್ಥಗಿತಗೊಳಿಸಿ ಸುರಕ್ಷತಾ ವಿಧಾನಗಳನ್ನು ಅನುಸರಿಸಲಾಗಿದೆ.
ಇನ್ನು ರೋಗ ಪತ್ತೆಯಾದ ದಾಸರಹಳ್ಳಿಯ ಭುವನೇಶ್ವರಿ ನಗರದ 1 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ರೋಗ ಪೀಡಿತ ವಲಯ ಹಾಗೂ 1 ರಿಂದ 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ರಾಜ್ಯ ಸರಕಾರ ಮಂಗಳವಾರ ಘೋಷಿಸಿದೆ. ಸದ್ಯ ರೋಗವು ಹತೋಟಿಯಲ್ಲಿದ್ದು ಸಾರ್ವಜನಿಕರು ಭಯಭೀತರಾಗುವ ಅವಶ್ಯಕತೆ ಇರುವುದಿಲ್ಲವೆಂದು ಇಲಾಖೆಯು ಮನವಿ ಮಾಡಿದೆ.
ಜಾಗೃತ ಕ್ರಮ
'ಸಾರ್ವಜನಿಕರು 70 ಡಿಗ್ರಿ ಸೆ.ಗಿಂತ ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸದ ಅಥವಾ ಅರ್ಧ ಬೆಂದ ಕೋಳಿ ಮಾಂಸ ಅಥವಾ ಕೋಳಿ ಮೊಟ್ಟೆಗಳನ್ನು ತಿನ್ನಬಾರದು.’