ಆ್ಯಪ್ ಮೂಲಕ ಗರ್ಭಿಣಿಯರಿಗೆ ಉಚಿತ ಸಮಾಲೋಚನೆ
Update: 2018-01-02 22:11 IST
ಬೆಂಗಳೂರು, ಜ.2: ತಾಯಿ ಮತ್ತು ನವಜಾತ ಶಿಶು ಸಾವುಗಳ ಸಂಖ್ಯೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಡಾಕ್ಸ್ ಆ್ಯಪ್ ಬಿಡುಗಡೆಗೊಳಿಸಿದ್ದು, ತಜ್ಞ ವೈದ್ಯರ ಜತೆ ಗರ್ಭಿಣಿ ಮಹಿಳೆಯರು ಉಚಿತ ಸಮಾಲೋಚನೆ ನಡೆಸಬಹುದಾಗಿದೆ.
ಪ್ರತಿ ತಿಂಗಳ 9ರಂದು ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ. ಬಂಜೆತನ, ಗರ್ಭಧಾರಣೆ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಗರ್ಭಿಣಿ ಮಹಿಳೆ ಅಸ್ವಸ್ಥವಾದರೆ ಸ್ಥಳದಿಂದಲೇ ಆ್ಯಪ್ ಮೂಲಕ ವೈದ್ಯರಿಂದ ಸಲಹೆ ಪಡೆದು ಚಿಕಿತ್ಸೆ ಪಡೆಯಬಹುದಾಗಿದೆ.
ಗರ್ಭಧಾರಣೆ, ಬಂಜೆತನ, ಮಾನಸಿಕ ಸಮಸ್ಯೆ, ಮಕ್ಕಳ ತಜ್ಞರು, ಜನರಲ್ ಮೆಡಿಸಿನ್, ಆಂಕಾಲಜಿಗೆ ಸಂಬಂಧಿಸಿದ ವಿಷಯಗಳು ಆ್ಯಪ್‌ನಲ್ಲಿ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಮಹಿಳೆಯರು ಕನ್ನಡ ಭಾಷೆಯಲ್ಲಿ ವೈದ್ಯರೊಂದಿಗೆ ಚಾಟ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.