ಎಂಸಿಜಿ ಪಿಚ್‌ಗೆ ಐಸಿಸಿ ಅತೃಪ್ತಿ

Update: 2018-01-02 18:37 GMT

ಮೆಲ್ಬೋರ್ನ್, ಜ.2: ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಆತಿಥ್ಯವಹಿಸಿರುವ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ(ಎಂಸಿಜಿ) ಪಿಚ್ ಕಳಪೆಯಾಗಿತ್ತು ಎಂದು ಐಸಿಸಿ ಅಭಿಪ್ರಾಯಪಟ್ಟಿದೆ. ಎಂಸಿಜಿ ಪಿಚ್ ಬಗ್ಗೆ ಉಭಯ ತಂಡಗಳು ಅಸಮಾಧಾನ ವ್ಯಕ್ತಪಡಿಸಿವೆ. ಆಸ್ಟ್ರೇಲಿಯ ತನ್ನ ಎರಡು ಇನಿಂಗ್ಸ್‌ಗಳಲ್ಲಿ 327 ಹಾಗೂ 4ಕ್ಕೆ 263 ರನ್ ಗಳಿಸಿದ್ದರೆ, ಇಂಗ್ಲೆಂಡ್ ಒಂದೇ ಇನಿಂಗ್ಸ್ ನಲ್ಲಿ 491 ರನ್ ಗಳಿಸಿತ್ತು. ‘‘ಎಂಸಿಜಿಯ ಪಿಚ್‌ನಲ್ಲಿ ಚೆಂಡು ಬೌನ್ಸ್ ಆಗುತ್ತಿರಲಿಲ್ಲ. ಪಂದ್ಯ ಮುಂದುವರಿದಂತೆ ವೇಗವೂ ಕಡಿಮೆಯಾಗಿತ್ತು. ಐದು ದಿನದೊಳಗೆ ಪಿಚ್ ಬದಲಾವಣೆಯಾಗುವುದಿಲ್ಲ. ಇಂತಹ ಪಿಚ್‌ನಲ್ಲಿ ಬ್ಯಾಟ್ ಹಾಗೂ ಚೆಂಡಿನ ನಡುವೆ ಸ್ಪರ್ಧೆ ಏರ್ಪಡಲು ಸಾಧ್ಯವಿಲ್ಲ. ಪಿಚ್ ಒಂದೋ ಬ್ಯಾಟ್ಸ್ ಮನ್‌ಗಳಿಗೆ ಅಥವಾ ಬೌಲರ್‌ಗೆ ಒಪ್ಪುವಂತಿರಬೇಕು’’ ಎಂದು ಮ್ಯಾಚ್ ರೆಫರಿ ರಂಜನ್ ಮದುಗಲೆ ಹೇಳಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಕ್ಕೆ ಎರಡು ವಾರದಲ್ಲಿ ಕಳಪೆ ಪಿಚ್ ವರದಿಯ ಬಗ್ಗೆ ಉತ್ತರ ನೀಡುವಂತೆ ಗಡುವು ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News