×
Ad

ಈಶ್ವರಪ್ಪ ಪಿಎ ಕಿಡ್ನಾಪ್ ಪ್ರಕರಣ : ಎಫ್‌ಐಆರ್ ರದ್ದು ಕೋರಿ ಆರೋಪಿ ರಾಜೇಂದ್ರ ಅರಸ್ ಹೈಕೋರ್ಟ್‌ಗೆ ಅರ್ಜಿ

Update: 2018-01-04 21:51 IST

ಬೆಂಗಳೂರು, ಜ.4: ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪಿಎ ವಿನಯ್ ಕಿಡ್ನಾಪ್ ಮತ್ತು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೆ ಆರೋಪಿ ರಾಜೇಂದ್ರ ಅರಸ್ ಎಫ್‌ಐಆರ್ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಎಫ್‌ಐಆರ್ ರದ್ದುಕೋರಿ ಆರೋಪಿ ರಾಜೇಂದ್ರ ಅರಸ್ ಸಲ್ಲಿಸಿರುವ ಅರ್ಜಿ ವಿಚಾರಣೆ ಶುಕ್ರವಾರ ಏಕ ಸದಸ್ಯ ಪೀಠದ ಮುಂದೆ ಬರುವ ಸಾಧ್ಯತೆಯಿದೆ.

ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ರಾಜೇಂದ್ರ ಅರಸ್ ಎರಡನೆ ಆರೋಪಿಯಾಗಿದ್ದು, ಈಗಾಗಲೇ ಪೊಲೀಸರು ಈತನ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News