ಬೆಂಗಳೂರು: ಪ್ರಶಸ್ತಿ ಪ್ರದಾನ ಸಮಾರಂಭ
Update: 2018-01-04 22:00 IST
ಬೆಂಗಳೂರು, ಜ. 4: ಸಾಹಿತ್ಯ ಸಂಘ ಹಾಗೂ ಗಣೇಶ ಮಂದಿರ ನಾಗರಿಕರ ವೇದಿಕೆಯಿಂದ ಸಾಮಾಜಿಕ ಚಿಂತಕ ವಿ.ಎಸ್.ಕೃಷ್ಣ ಅಯ್ಯರ್ 96ನೇ ಜನ್ಮದಿನದ ಅಂಗವಾಗಿ ಜ.7ರಂದು, ಶಂಕರಪುರದ ಉದಯಭಾನು ಕಲಾಸಂಘದ ಸಾಂಸ್ಕೃತಿಕ ಭವನದಲ್ಲಿ ವಿ.ಎಸ್. ಕೃಷ್ಣ ಅಯ್ಯಂಗಾರ್ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿದೆ.
ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕ ಎಲ್.ಎ. ರವಿಸುಬ್ರಹ್ಮಣ್ಯಂ, ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಸಾಹಿತಿ ದೊಡ್ಡರಂಗೇಗೌಡ ಬಿಬಿಎಂಪಿ ಸದಸ್ಯರಾದ ಡಿ.ಎನ್.ರಮೇಶ್, ಎ.ಎಚ್.ಬಸವರಾಜು ರ ಉಪಸ್ಥಿತಿ ಇರುತ್ತದೆ.