ನಿಯಮ

Update: 2018-01-05 18:52 GMT
Editor : -ಮಗು

ವ್ಯಾಯಾಮ ಶಾಲೆಯೊಂದು ದಢೂತಿ ಅಸಾಮಿಯ ಗಮನ ಸೆಳೆಯಿತು.
ಅದರ ಮುಂದೆ ‘ಒಂದೇ ದಿನದಲ್ಲಿ ಹತ್ತು ಕೆಜಿ ತೂಕ ಇಳಿಸಲಾಗುವುದು-ನಿಯಮಗಳು ಅನ್ವಯಿಸುತ್ತವೆ’ ಎಂದು ಬರೆಯಲಾಗಿತ್ತು.
ದಢೂತಿ ಅಸಾಮಿ ಉತ್ಸಾಹದಿಂದ ವ್ಯಾಯಾಮ ಶಾಲೆಯ ವ್ಯವಸ್ಥಾಪಕರ ಮುಂದೆ ಹೋಗಿ ನಿಂತ.
‘‘ಹೌದೆ? ಒಂದೇ ದಿನದಲ್ಲಿ ಹತ್ತು ಕೆಜಿ ತೂಕ ಇಳಿಸಲಾಗುತ್ತದೆಯೇ?’’
‘‘ಹೌದು. ಆದರೆ ನಿಯಮಗಳು ಅನ್ವಯಿಸುತ್ತವೆೆ’’ ವ್ಯವಸ್ಥಾಪಕ ಹೇಳಿದ.
‘‘ಅದೇನದು?’’ ದಢೂತಿ ಅಸಾಮಿ ಕುತೂಹಲದಿಂದ ಕೇಳಿದ.
‘‘ತೂಕ ನೋಡಲು ನಮ್ಮದೇ ಸ್ಕೇಲ್‌ನ್ನು ಬಳಸಬೇಕು’’ ವ್ಯವಸ್ಥಾಪಕ ತಣ್ಣಗೆ ಹೇಳಿದ.

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !