×
Ad

ಡಾ.ಆರತಿ ಕೃಷ್ಣಗೆ ಬಹರೈನ್‌ನಲ್ಲಿ ಸನ್ಮಾನ

Update: 2018-01-08 22:28 IST

ಬೆಂಗಳೂರು, ಜ.8: ಭಾರತೀಯ ಮೂಲದವರಿಂದ ಸ್ಥಾಪಿತವಾದ ಜಾಗತಿಕ ಸಂಘಟನೆಯು (GOPIO-Global Organisation of People of Indian Origin) ಜ.6 ರಿಂದ 9ರವರೆಗೆ ಬಹರೈನ್‌ನ ಗಲ್ಫ್ ಹೊಟೇಲ್‌ನಲ್ಲಿ ಬೃಹತ್ ಸಮ್ಮೇಳನ ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ 40 ದೇಶಗಳ ಸುಮಾರು 400 ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಭಾರತದಿಂದ ಡಾ.ಸ್ಯಾಂ ಪಿತ್ರೋಡ, ಡಾ.ಶಶಿ ತರೂರ್, ಡಾ.ಆರತಿ ಕೃಷ್ಣ, ಮಧು ಯಕ್ಷಿಗೌಡ್ ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಜಾಗತಿಕ ಮಟ್ಟದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಭಾರತೀಯ ಮೂಲದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು. ಅದರಲ್ಲಿ ರಾಜ್ಯ ಸರಕಾರದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಅನಿವಾಸಿ ಭಾರತೀಯ/ಕನ್ನಡಿಗರ ಕಳಕಳಿಗೆ ಶ್ರಮಿಸುತ್ತಿರುವುದಕ್ಕಾಗಿ ಗೌರವಿಸಿ ಸನ್ಮಾನಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News