ಬಹರೈನ್ ನಲ್ಲಿ ಬೃಹತ್ ಸಮ್ಮೇಳನ: ಡಾ. ಆರತಿ ಕೃಷ್ಣ ಅವರಿಗೆ ಸನ್ಮಾನ

Update: 2018-01-09 18:26 GMT

ಬಹರೈನ್, ಜ. 9: ಭಾರತೀಯ ಮೂಲದವರಿಂದ ಸ್ಥಾಪಿತವಾದ ಜಾಗತೀಕ ಸಂಘಟನೆ (GOPIO- Global Organisation of People of Indian Origin) ಜ.6ರಿಂದ 9ರ ವರೆಗೆ ಬಹರೈನ್ ಗಲ್ಫ್ ಹೊಟೇಲ್ ನಲ್ಲಿ ಬೃಹತ್ ಸಮ್ಮೇಳನ ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ 40 ದೇಶಗಳ ಸುಮಾರು 400 ಪ್ರಮುಖ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಭಾರತದಿಂದ ಡಾ. ಸ್ಯಾಂ ಪಿತ್ರೋಡ, ಡಾ. ಶಶಿ ತರೂರು, ಡಾ. ಆರತಿ ಕೃಷ್ಣ, ಶ್ರೀ ಮಧು ಯಸ್ಕಿ ಭಾಗವಹಿಸಿದ್ದಾರೆ.

ಸಮಾವೇಶದಲ್ಲಿ ಜಾಗತೀಕ ಮಟ್ಟದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಭಾರತೀಯ ಮೂಲದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು. ಅದರಲ್ಲಿ ಕರ್ನಾಟಕ ಸರಕಾರ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಅನಿವಾಸಿ ಭಾರತೀಯ, ಕನ್ನಡಿಗರ ಕಳಕಳಿಗೆ ಶ್ರಮಿಸುತ್ತಿರುವುದಕ್ಕಾಗಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು ಎಂದು ಆಪ್ತ ಕಾರ್ಯದರ್ಶಿ ಲೋಹಿತ್ ಡಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News