ಬೆಂಗಳೂರು: ಸ್ವಚ್ಛ ಸರ್ವೆಕ್ಷಣೆಗೆ ಸಹಕರಿಸಲು ಮನವಿ
ಬೆಂಗಳೂರು, ಜ.9: ಕೇಂದ್ರ ಸರಕಾರವು ಜನವರಿ-ಫೆಬ್ರವರಿ ತಿಂಗಳಿನಲ್ಲಿ ರಾಜ್ಯದ ಎಲ್ಲಾ ನಗರ ಅಥವಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛ ಸರ್ವೇಕ್ಷಣೆ-2018 ಅನ್ನು ಹಮ್ಮಿಕೊಂಡಿದೆ.
ಸ್ಚಚ್ಛ ಭಾರತ್ ಮಿಷನ್ ಅಡಿಯಲ್ಲಿ ರಾಜ್ಯದ ಎಲ್ಲಾ ನಗರ ಹಾಗೂ ಪಟ್ಟಣಗಳು ಸೇರಿದಂತೆ ದೇಶದ 4041 ನಗರಗಳಲ್ಲಿ ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆ, ಶೌಚಾಲಯ ವ್ಯವಸ್ಥೆ ಕುರಿತಂತೆ ಯಾವ ರೀತಿ ಪಾಲಿಸುತ್ತಿವೆ ಹಾಗೂ ನಾಗರೀಕರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಲು ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯನ್ನು ಆರಂಭ ಮಾಡಲಾಗಿದೆ.
ಈ ಸರ್ವೇಕ್ಷಣ ಸಮೀಕ್ಷೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಸೇವಾ ಹಂತಕ್ಕೆ ಶೇ.35 ನೇರ ವೀಕ್ಷಣೆಗೆ 30 ಮತ್ತು ಸಾರ್ವಜನಿಕ ಅಭಿಪ್ರಾಯಗಳಿಗೆ ಶೇ 35 ಅಂಕಗಳನ್ನು ಮೀಸಲಿರಿಸಿದೆ.
ಸಾರ್ವಜನಿಕರು ತಮ್ಮ ಮನೆ ಆವರಣ ಮತ್ತು ರಸ್ತೆ ಶುಚಿಯಾಗಿಟ್ಟುಕೊಳ್ಳುವುದರ ಜೊತೆಗೆ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ಸಂಗ್ರಹಣೆ ಗಾಡಿಗೆ ನೀಡುವುದು. ಮೊಬೈಲ್ ಹೊಂದಿರುವವರು ಸ್ವಚ್ಛತಾ ಆಪ್ ಡೌನ್‌ಲೋಡ್ ಮಾಡಿಕೊಂಡು ಕಸ ನಿರ್ವಸಲು ಪೌರ ಸಿಬ್ಬಂದಿಗೆ ಸಹಕರಿಸುವುದು. ಒಟ್ಟಾರೆಯಾಗಿ ಈ ಸಮೀಕ್ಷೆಯಲ್ಲಿ ನಗರಗಳು ಹೆಚ್ಚು ಶ್ರೇಯಾಂಕ ಗಳಿಸಲು ಸಮೀಕ್ಷೆದಾರರಿಗೆ ಸಮರ್ಪಕವಾಗಿ ಉತ್ತರಿಸುವಂತೆ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.