ಭೂಮಿ ಮೊಬೈಲ್ ಆ್ಯಪ್ ಬಿಡುಗಡೆ
ಬೆಂಗಳೂರು, ಜ.9: ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ರೈತನ ಬೆಳೆಗೆ ಉತ್ತಮ ಮಾರುಕಟ್ಟೆ, ಬೆಲೆ ದೊರೆಯುವಲ್ಲಿ ನೆರವಾಗುವ ಸಲುವಾಗಿ ಭೂಮಿ.ಕೋ.ಇನ್ ಎಂಬ ಕೃಷಿ ಸಮುದಾಯ ವೇದಿಕೆಯು ಭೂಮಿ ಎಂಬ ನೂತನ ಆ್ಯಪ್ ಬಿಡುಗಡೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎನ್.ರಘುನಂದನ್, ವೇದಿಕೆಯು ಅಂತರ್ಜಾಲದಲ್ಲಿ ಸಕ್ರಿಯವಾಗಿದ್ದು, ಇಂತಹ ವಿನೂತನ ತಂತ್ರಜ್ಞಾನದ ಮೂಲಕ ಅಗತ್ಯ ಮಾಹಿತಿಯನ್ನು ರೈತರಿಗೆ ನೇರವಾಗಿ ಒದಗಿಸಲಿದೆ. ಆ್ಯಪ್‌ನಲ್ಲಿ ರೈತ ತನ್ನ ಬೆಳೆಯ ವಿವರ ಪ್ರಕಟಿಸಿದಲ್ಲಿ ಅದರಿಂದ ವ್ಯಾಪಾರಸ್ಥರಿಗೆ ನೆರವಾಗುತ್ತದೆ. ಬೀಜ ಬಿತ್ತನೆಯ ದಿನದಿಂದ ಕಟಾವಿನವರೆಗೆ ಎಲ್ಲಾ ವಿವರ ಲಭ್ಯ ಇರಲಿವೆ. ಹಾಗಾಗಿ ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ರೈತರು ತಮಗೆ ಆಗುವ ಲಾಭ ಹಾಗೂ ಇತರೆ ಮಾಹಿತಿಯನ್ನು ವೇದಿಕೆ ಜತೆ ಹಂಚಿಕೊಳ್ಳಬೇಕಿಲ್ಲ. ಆಸಕ್ತ ರೈತರು ಸ್ಥಳೀಯ ಕೇಂದ್ರಗಳಲ್ಲಿರುವ ಸೇಲ್ಸ್ ಏಜೆಂಟ್‌ಗಳ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ಜೊತೆಗೆ ವಾರ್ಷಿಕ ನವೀಕರಣ ಸೌಲಭ್ಯ ಇದೆ. ಕೃಷಿ ವಿವಿ ತಂತ್ರಜ್ಞಾನ ಬಳಸಿ ಬೆಳೆಯ ತಪಾಸಣೆ ಹಾಗೂ ಶಿಾರಸ್ಸು ಒದಗಿಸಲಾಗುತ್ತದೆ. ಒಂದು ಕರೆ ಮಾಡಿ, ಅಗತ್ಯ ಸೇವೆ ಪಡೆಯಬಹುದು. ಹಾಗೂ ತಮಗೆ ಬೇಕಾದ ಸಾಮಗ್ರಿಗಳನ್ನು ತರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 080-2639 2267 ಸಂಪರ್ಕಿಸಬಹುದು ಎಂದರು.